Ad image

ನವೆಂಬರ್ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಓನ್ಲಿ ಶಾಂತಿ: ರಾಮಲಿಂಗಾ ರೆಡ್ಡಿ

Team SanjeMugilu
1 Min Read

ರಾಮನಗರ: ನವೆಂಬರ್ ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ, ಒನ್ಲಿ ಶಾಂತಿ. ನಿಮಗೆ ಏನೇ ಮಾಹಿತಿ ಬೇಕಿದ್ದರೂ ಡಿಕೆಶಿ ಅವರನ್ನ ಕೇಳಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಡಿಸಿಎಂ ಡಿಕೆಶಿ  ಬಣದ ಶಾಸಕರು ದೆಹಲಿ ಯಾತ್ರೆ ವಿಚಾರ ಕುರಿತು ರಾಮನಗರದಲ್ಲಿ ಮಾತನಾಡಿದ ಅವರು, ಯಾರು ದೆಹಲಿಗೆ ಹೋಗಿದ್ದಾರೆ, ಯಾಕೆ ಹೋಗಿದ್ದಾರೆ ಗೊತ್ತಿಲ್ಲ. ದೆಹಲಿಯಲ್ಲಿ ಏನೇನು ಆಗಿದ್ಯೋ ನಮಗೆ ಗೊತ್ತಿಲ್ಲ. ನಿಮಗೆ ಸಂಪೂರ್ಣ ಮಾಹಿತಿ ಬೇಕಿದ್ರೆ ಡಿಕೆಶಿ, ಡಿ.ಕೆ.ಸುರೇಶ್ ಜೊತೆ ಮಾತನಾಡಿ. ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಗೊತ್ತಿಲ್ಲ. ದಲಿತ ಸಚಿವರು ಸಭೆ ಮಾಡಿರೋದು ನನಗೆ ಗೊತ್ತಿಲ್ಲ. ಏನೂ ನಾಲ್ಕು ಜನ ಊಟಕ್ಕೆ ಸೇರಿಕೊಂಡ್ರೆ ಅದರ ಬಗ್ಗೆ ಮಾತನಾಡಲು ಆಗುತ್ತಾ? ಡಿನ್ನರ್ ಪಾಲಿಟಿಕ್ಸ್ಗೆ ನನ್ನನ್ನು ಯಾರೂ ಕರೆಯುತ್ತಿಲ್ಲ. ನಾನು ಯಾವ ಬಣವೂ ಅಲ್ಲ, ಕಾಂಗ್ರೆಸ್ ಬಣ. ಸರ್ಕಾರದಲ್ಲಿ ಯಾರೂ ಗೊಂದಲ ಮಾಡಿಕೊಳ್ಳಬಾರದು. ಎಲ್ಲವನ್ನೂ ಹೈಕಮಾಂಡ್ ತೀರ್ಮಾನಕ್ಕೆ ಬಿಡಬೇಕು ಎಂದರು.

ನಮ್ಮಲ್ಲಿ ಬಿಜೆಪಿಯಲ್ಲಿದ್ದಷ್ಟು ಬಣ ಇಲ್ಲ, ಬಿಜೆಪಿಯಲ್ಲಿ ನಾಲ್ಕೈದು ಬಣ ಇದೆ. ನಮ್ಮಲ್ಲಿ ಒಂದೇ ಬಣ ಕಾಂಗ್ರೆಸ್ ಬಣ. ನಮ್ಮಲ್ಲಿ ಹತ್ತಾರು ಹಿರಿಯ ನಾಯಕರು ಇದ್ದಾರೆ. ನಮ್ಮ ಪಕ್ಷ ಸದೃಢವಾಗಿದೆ. ಸರ್ಕಾರ ಎರಡೂವರೆ ವರ್ಷ ಪೂರೈಸಿದೆ. ಇದು ಸೆಕೆಂಡ್ ಇನ್ನಿಂಗ್ಸ್ ಅಂತ ಏನಿಲ್ಲ, ಐದು ವರ್ಷ ಒಂದೇ ಇನ್ನಿಂಗ್ಸ್. ಐದು ವರ್ಷವೂ ಸರ್ಕಾರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದರು.

Share This Article