ಬೆಂಗಳೂರು : ಅಧಿಕಾರ ಹಂಚಿಕೆ ವಿಚಾರ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ದಿನಕ್ಕೊಂದು ಮೀಟಿಂಗ್, ಕ್ಷಣಕ್ಕೊಂದು ಟ್ವಿಸ್ಟ್ ಮೂಲಕ ಕುರ್ಚಿ ಕಾದಾಟ ಜೋರಾಗಿದೆ. ಸಿಎಂ ಸ್ಥಾನಕ್ಕೇರಲು ಡಿಸಿಎಂ ಡಿಕೆ ಶಿವಕುಮಾರ್ ನಾನಾ ರಣತಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಬಣದವರ ಮೂಲಕವೇ ಸಿಎಂ ಮನವೊಲಿಕೆ ನಡೆಸಲು ಡಿಕೆಶಿ ಮುಂದಾಗಿದ್ದು, ಸಚಿವ ಸತೀಶ್ ಜಾರಕಿಹೊಳಿ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ತಡರಾತ್ರಿ ಸಾಹುಕಾರ್ ಜೊತೆ ಸೀಕ್ರೆಟ್ ಮೀಟಿಂಗ್
ಕಾಂಗ್ರೆಸ್ನ ಪ್ರಭಾವಿ ನಾಯಕರಾದ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ತಡರಾತ್ರಿಯಲ್ಲಿ ಭೇಟಿಯಾಗಿ ಒನ್ ಟು ಒನ್ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಹಾವು ಮುಂಗುಸಿಯಂತಿದ್ದ ನಾಯಕರು ಇದೀಗ ಒಂದಾಗಿ ಸಭೆ ನಡೆಸಿದ್ದ ವಿಚಾರ ಅಚ್ಚರಿಗೆ ಮೂಡಿಸಿದೆ.
1 ಗಂಟೆಗೂ ಹೆಚ್ಚು ಕಾಲ ಸಭೆ
ನಗರದ ಖಾಸಗಿ ಹೋಟೆಲ್ನಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸತೀಶ್ ಜಾರಕಿಹೋಳಿ ಗೌಪ್ಯ ಸಭೆ ನಡೆಸಿದ್ದು, 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಸಿಎಂ ಮನವೊಲಿಸಿ ಎಂದು ಸತೀಶ್ ಜಾರಕಿಹೊಳಿಗೆ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.
ಸಿಎಂ ಮನವೊಲಿಕೆ ಮಾಡಲು ಡಿಕೆಶಿ ಮನವಿ
ಸಚಿವ ಸತೀಶ್ ಜಾರಕಿಹೊಳಿ ಅವ್ರು ಸಿಎಂ ಸಿದ್ದರಾಮಯ್ಯ ಬಣದವರಾಗಿದ್ದಾರೆ. ಪವರ್ ಶೇರಿಂಗ್ ವಿಚಾರ ಬಗ್ಗೆ ಕೂಡ ಸಿಎಂ ಪರ ಸತೀಶ್ ಡಿನ್ನರ್ ಮೀಟಿಂಗ್ ಮಾಡಿದ್ರು. ಇದೀಗ ಡಿಕೆಶಿ ಸಿಎಂ ಬಣದಲ್ಲಿನ ಪ್ರಭಾವಿಗಳ ಮೂಲಕ ಸಿಎಂ ಸ್ಥಾನ ಬಿಟ್ಟು ಕೊಡಲು ಮನವೊಲಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸತೀಶ್ – ಡಿಕೆಶಿ ನಡುವೆ ನಡೆದ ಚರ್ಚೆ ಏನು..!?
ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದ ದಿನದಿಂದಲೂ ಅಧಿಕಾರದಲ್ಲಿ ಇದ್ದಾರೆ. ಈಗ ಸಿಎಂ ಹುದ್ದೆ ಬಿಟ್ಟು ಕೊಡುವಂತೆ ಹೇಳಿ ಎಂದು ಡಿಕೆಶಿ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿದೆ. ಅವರೇ ನಮ್ಮ ನಾಯಕರು, ನನಗೂ ಉಳಿದ ಅವಧಿ ಅವಕಾಶ ಕೊಡಲಿ ಎಂದಿದ್ದಾರಂತೆ.
ಸಿಎಂ ಹುದ್ದೆ ಬಿಟ್ಟು ಕೊಡುವಂತೆ ನೀವೇ ಅವರ ಮನವೊಲಿಕೆ ಮಾಡಿ, ಅವರ ಮಾರ್ಗದರ್ಶನದಲ್ಲೇ ನಾನು ಸರ್ಕಾರ ನಡೆಸುತ್ತೇನೆ ಎಂದು ಡಿಕೆಶಿ ಮಾತಾಡಿದ್ದಾರೆ ಎನ್ನಲಾಗ್ತಿದೆ.
ಸತೀಶ್ಗೆ ಡಿಕೆಶಿ -ಆಫರ್.!?
ನಾನು ಸಿಎಂ ಆದರೆ ನೀವು ಡಿಸಿಎಂ ಜೊತೆಗೆ ಕೆಪಿಸಿಸಿ ಅಧ್ಯಕ್ಷರೂ ನೀವೇ ಆಗಬಹುದು ಎಂದು ಸತೀಶ್ ಜಾರಕಿಹೊಳಿಗೆ ಡಿಕೆಶಿ ಬಿಗ್ ಆಫರ್ ನೀಡಿದ್ದಾರಂತೆ. ನೀವು ಬಯಸಿದ ಖಾತೆಯನ್ನೆ ಪಡೆದುಕೊಳ್ಳಿ, ನನ್ನ ರೀತಿ ಎರಡೂ ಮೂರು ಹುದ್ದೆಗಳಲ್ಲಿ ಮುಂದುವರೆಯಬಹುದು. ಒಟ್ಟಾಗಿ ಆಡಳಿತ ನಡೆಸೋಣ
2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರೋಣ 2029ಕ್ಕೆ ಲೋಕಸಭೆಗೆ ಹೆಚ್ಚು ಸೀಟು ಗೆದ್ದು ರಾಹುಲ್ ಗಾಂಧಿ ಕೈ ಬಲಪಡಿಸೋಣ ಎಂದು ಡಿಕೆಶಿ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗ್ತಿದೆ.
ಪವರ್ ಶೇರಿಂಗ್ ನಮ್ಮ ನಡುವೆ ಆಗಿದೆ ಎಂದ ಡಿಕೆಶಿಗೆ ನಾನು ನೀವು ಹೇಳಿದ್ದನ್ನು ಸಿಎಂಗೆ ತಿಳಿಸುತ್ತೇನೆ. ಆದ್ರೆ ನೀವು ಸಿಎಂ ಹುದ್ದೆ ಬಿಟ್ಟು ಕೊಡಿ ಅಂತ ನಾನು ಹೇಳಿದರೆ ತಪ್ಪಾಗುತ್ತದೆ. ನಿಮ್ಮ ಮನದ ಇಂಗಿತವನ್ನು ತಿಳಿಸುತ್ತೇನೆ ಎಂದು ಸತೀಶ್, ಡಿಕೆಶಿಗೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಮನವೊಲಿಸುವಷ್ಟು ನಾನು ದೊಡ್ಡವನಲ್ಲ, ಹೈಕಮಾಂಡ್ ಇದೆ ಎಂದು ಸಿಎಂ ಹೇಳಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ದ ಎಂದಿದ್ದಾರೆ. ಹೈಕಮಾಂಡ್ ಏನು ಹೇಳುತ್ತೆ ಅದಕ್ಕೆ ನಾವೆಲ್ಲರೂ ಬದ್ದ ಎಂದ ಸತೀಶ್, ಡಿಸಿಎಂ, ಕೆಪಿಸಿಸಿ ಹುದ್ದೆ ಆಫರ್ ಗೆ ನಕ್ಕು ಸುಮ್ಮನಾಗಿದ್ದಾರಂತೆ.
ಸಾಹುಕಾರ್ ಜೊತೆ ಡಿಕೆಶಿ ಸೀಕ್ರೆಟ್ ಮೀಟಿಂಗ್; ಸತೀಶ್ಗೆ ಬಿಗ್ ಆಫರ್ ಕೊಟ್ಟ ಡಿಸಿಎಂ?
