ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ನಮ್ಮ ಪ್ರಧಾನಿ ಮೋದಿ ಭೇಟಿ ನೀಡಿದ ಕ್ಷಣ ನಿಜಕ್ಕೂ ಐತಿಹಾಸಿಕವಾಗಿತ್ತು. ಕೃಷ್ಣನ ದರ್ಶನ ಪಡೆದು, ನೆರೆದಿದ್ದ ಜನರನ್ನುದ್ದೇಶಿಸಿ ಅವರು ಮಾಡಿದ ಭಾಷಣ ಬರೀ ಮಾತಾಗಿರಲಿಲ್ಲ, ಅದು ದೇಶದ ಮುನ್ನಡೆಗೆ ಬೇಕಾದ ದಿಕ್ಸೂಚಿಯಾಗಿತ್ತು. ಈ ವೇಳೆ ಅವರು ದೇಶದ ಅಭಿವೃದ್ಧಿಗಾಗಿ 9 ಪ್ರಮುಖ ಸಂಕಲ್ಪಗಳನ್ನು ಜನರ ಮುಂದಿಟ್ಟರು. ಪ್ರತಿಯೊಬ್ಬ ಭಾರತೀಯನು ಪಾಲಿಸಬೇಕಾದ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಈ ಒಂಬತ್ತು ಸೂತ್ರಗಳು ಯಾವುವು ಅನ್ನೋದನ್ನ ಇಲ್ಲಿ ನೋಡೋಣ.
ಪ್ರಕೃತಿ ಉಳಿಸಿ, ಭೂಮಿ ತಾಯಿಯ ಸೇವೆ ಮಾಡಿ
ಮೋದಿಯವರು ಹೇಳಿದ ಮೊದಲ ಮೂರು ಸಂಕಲ್ಪಗಳು ನೇರವಾಗಿ ಪರಿಸರಕ್ಕೆ ಲಿಂಕ್ ಆಗಿವೆ. ಮೊದಲನೆಯದಾಗಿ ‘ಜಲ ಸಂರಕ್ಷಣೆ’. ನೀರಿಲ್ಲದೆ ಜೀವನ ಇಲ್ಲ, ಹಾಗಾಗಿ ಪ್ರತಿ ಹನಿ ನೀರನ್ನೂ ಉಳಿಸೋದು ನಮ್ಮ ಆದ್ಯತೆ ಆಗ್ಬೇಕು. ಎರಡನೇದು ‘ಗಿಡ ನಡುವ ಅಭಿಯಾನ’. ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟರೆ ದೇಶ ಹಸಿರಾಗುತ್ತೆ. ಇನ್ನು ರೈತರಿಗೆ ಒಂದು ಕಿವಿಮಾತು ಹೇಳಿದ್ದಾರೆ, ಅದೇ ‘ನ್ಯಾಚುರಲ್ ಫಾರ್ಮಿಂಗ್’. ಕೆಮಿಕಲ್ ಹಾಕಿ ಮಣ್ಣು ಹಾಳು ಮಾಡೋ ಬದ್ಲು, ನೈಸರ್ಗಿಕ ಕೃಷಿಗೆ ಒತ್ತು ಕೊಡಿ ಅಂತ ಹೇಳಿದ್ದಾರೆ.
ಸ್ವದೇಶಿ ಮಂತ್ರ ಮತ್ತು ಆರ್ಥಿಕ ಶಕ್ತಿ!
ನಾವು ಬರೀ ಫಾರಿನ್ ವಸ್ತುಗಳ ಮೋಹ ಮಾಡ್ಬಾರ್ದು ಅನ್ನೋದು ಮೋದಿಯವರ ಸ್ಟ್ರಾಂಗ್ ಮೆಸೇಜ್. ಅದ್ಕೆ ‘ಸ್ವದೇಶಿ ವಸ್ತುಗಳ ಬಳಕೆ’ಗೆ ಒತ್ತು ಕೊಡಿ, ಆಗ ನಮ್ಮ ದುಡ್ಡು ನಮ್ಮಲ್ಲೇ ಇರುತ್ತೆ. ಹೀಗಾದ್ರೆ ‘ಬಡವರ ಬದುಕು ಬದಲಾವಣೆ’ ಆಗೋಕೆ ಸಾಧ್ಯ. ಬಡವರು ಉದ್ದಾರ ಆದ್ರೆ ದೇಶ ತಾನಾಗೇ ಮೇಲೆ ಬರುತ್ತೆ. ಈಗಾಗಲೇ ವಿಶ್ವದ ದೊಡ್ಡ ದೊಡ್ಡ ಅರ್ಥ ವ್ಯವಸ್ಥೆಗಳು ಭಾರತದ ಮುಂದೆ ಮಂಡಿಯೂರುತ್ತಿವೆ, ಅಂದ್ರೆ ನಮ್ಮ ಆರ್ಥಿಕತೆ ಅಷ್ಟು ಸ್ಟ್ರಾಂಗ್ ಆಗ್ತಿದೆ ಅನ್ನೋದನ್ನ ಮೋದಿಯವರು ಹೆಮ್ಮೆಯಿಂದ ಹೇಳಿಕೊಂಡ್ರು.
ಆರೋಗ್ಯ, ಯೋಗ ಮತ್ತು ಜ್ಞಾನದ ರಕ್ಷಣೆ
ಆರೋಗ್ಯವೇ ಭಾಗ್ಯ ಅಲ್ವಾ? ಅದ್ಕೆ ಫಿಟ್ ಆಗಿರೋಕೆ ‘ಯೋಗ’ ಮಾಡಿ, ಫಿಟ್ನೆಸ್ ಕಡೆ ಗಮನ ಕೊಡಿ ಅಂತ ಮೋದಿ ಕರೆ ನೀಡಿದ್ದಾರೆ. ಪ್ರತಿಯೊಬ್ಬರ ‘ಆರೋಗ್ಯ’ ಚೆನ್ನಾಗಿದ್ರೆ ದೇಶ ಆರೋಗ್ಯವಾಗಿರುತ್ತೆ. ಕೊನೆಯದಾಗಿ ಒಂದು ಇಂಟರೆಸ್ಟಿಂಗ್ ವಿಷ್ಯ ಹೇಳಿದ್ದಾರೆ, ಅದೇ ‘ಪಾಂಡು ಲಿಪಿಗಳ ಸಂರಕ್ಷಣೆ’. ನಮ್ಮ ಹಿರಿಯರು ಬರೆದಿಟ್ಟಿರೋ ತಾಳೆಗರಿ ಅಥವಾ ಹಳೆಯ ಲಿಪಿಗಳಲ್ಲಿ ಅಪಾರ ಜ್ಞಾನ ಅಡಗಿದೆ. ಅದನ್ನ ಕಳೆದು ಹೋಗೋಕೆ ಬಿಡಬಾರದು, ಆ ಜ್ಞಾನವನ್ನು ಉಳಿಸಿ ಬೆಳೆಸೋದು ನಮ್ಮೆಲ್ಲರ ಜವಾಬ್ದಾರಿ.
ಒಟ್ನಲ್ಲಿ ಕೃಷ್ಣನ ಸಾಕ್ಷಿಯಾಗಿ ಮೋದಿ ತಗೊಂಡಿರೋ ಈ 9 ಸಂಕಲ್ಪಗಳು ಸುಮ್ನೆ ಭಾಷಣಕ್ಕೆ ಸೀಮಿತ ಆಗಬಾರದು. ಇದನ್ನ ನಾವೆಲ್ಲ ಸೀರಿಯಸ್ ಆಗಿ ಫಾಲೋ ಮಾಡಿದ್ರೆ ದೇಶ ಸೂಪರ್ ಪವರ್ ಆಗೋದು ಗ್ಯಾರಂಟಿ.
ಉಡುಪಿ ಕೃಷ್ಣನ ಅಂಗಳದಲ್ಲಿ ಮೋದಿ ‘ನವ’ ಶಪಥ! ದೇಶದ ಭವಿಷ್ಯಕ್ಕೆ ಒಂಬತ್ತು ಸೂತ್ರಗಳು!
