ಚಿಕ್ಕಬಳ್ಳಾಪುರ: ಆಕೆ ಇನ್ನೂ 18 ವರ್ಷದ ಯುವತಿ, ಬಾಳಿ ಬದುಕಬೇಕಾದ ಆ ಯುವತಿ 18 ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿ ಸಾವಿನ ಮನೆ ಸೇರಿಕೊಂಡಿದ್ದಾಳೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳೋಕೆ ಮೇಲ್ನೋಟಕ್ಕೆ ಹೊಟ್ಟೆನೋವು ಕಾರಣ ಅಂತಿದ್ರೂ ಆಕೆಯ ನಡೆ ವರ್ತನೆ ಮಾತ್ರ ದೆವ್ವದ ಕಾಟ ಅನ್ನೋ ಅನುಮಾನವೂ ಪೋಷಕರಲ್ಲಿ ಮೂಡುವಂತೆ ಮಾಡಿದೆ.
ಆಕೆ ಹೆಸರು ಶಾರದ ಅಂತ ಇನ್ನೂ 18 ವರ್ಷ. ಇನ್ನೂ ಹಲವು ವರ್ಷ ಬಾಳಿ ಬದುಕಬೇಕಾದ ಶಾರದಾ ತನ್ನ 18 ವಯಸ್ಸಿನಲ್ಲೇ ಸೂಸೈಡ್ ಮಾಡಿಕೊಂಡು ಜೀವ ಬಿಟ್ಟಿದ್ದಾಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬುರಡುಗುಂಟೆ ಗ್ರಾಮದ ಅಂಜನಪ್ಪ ಹಾಗೂ ಮಧುಶ್ರಿ ದಂಪತಿಯ ಮಗಳು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒರ್ವ ಗಂಡು ಮಗನಿದ್ದಾನೆ.
ಕೆಲ ವರ್ಷಗಳ ಹಿಂದೆ ಶಾರದಾ ತಂದೆ ಅಂಜನಪ್ಪ ತೀರಿಕೊಂಡ ಹಿನ್ನಲೆ, ಶಾರದಾ ತಾಯಿ ಮಧುಶ್ರೀ ತನ್ನ ಕಿರಿಯ ಮಗಳು ಇದೇ ಶಾರದಾ ಹಾಗೂ ಮಗನೊಂದಿಗೆ ತನ್ನ ಹಿರಿಯ ಮಗಳು ನಾಗಮಣಿಯನ್ನ ಮದುವೆ ಮಾಡಿಕೊಟ್ಟಿದ್ದ ಚಿಕ್ಕಬಳ್ಳಾಪುರದ ಕಣಿವೆ ನಾರಾಯಣಪುರದ ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ಲು, ಆದ್ರೆ ಕಿರಿ ಮಗಳು ಶಾರದಾಗೆ ಪದೇ ಪದೇ ಹೊಟ್ಟೆ ನೋವು, ಎಷ್ಟೇ ಆಸ್ಪತ್ರೆಗಳಿಗೂ ತೋರಿಸಿದ್ರೂ ನೋ ಯೂಸ್, ಆಗಾಗ್ಗೆ ರಕ್ತ ವಾಂತಿ ಬೇರೆ ಅಂತೆ, ಇದಕ್ಕೆಲ್ಲಾ ಶಾರದಾ ಕಳೆದ 4 ವರ್ಷಗಳ ಹಿಂದೆ ಬಿದ್ದಿದ್ದ ಬುರುಡುಗುಂಟೆ ಗ್ರಾಮದ ಬಳಿ ಇರೋ ಸ್ಮಶಾನದ ಸಮೀಪ ಇರೋ ಮೂರು ದಾರಿಗಳು ಸಂಗಮಿಸೋ ಅದೊಂದು ಜಾಗವಂತೆ, ಅದೊಂದು ದಿನ ಶಾರದಾ ಆ ಜಾಗದಲ್ಲಿ ಬಿದ್ದು ಮನೆಗೆ ಬಂದಿದ್ಲಂತೆ, ಅಂದಿನಿಂದಲೇ ಇದೆಲ್ಲವೂ, ಯಾವುದೋ ಗಾಳಿ ಸೋಕಿದೆ, ಅದರಿಂದಲೇ ಮಗಳು ಚಿತ್ರ ವಿಚಿತ್ರವಾಗಿ ವರ್ತನೆ ಮಾಡ್ತಿದ್ಲು, ಅದ್ರಿಂದಲೇ ಮಗಳ ಸಾವಾಗಿದೆ ಅಂತಾರೆ ತಾಯಿ.
ಯಾವ ಆಸ್ಪತ್ರೆಗಳಲ್ಲಿ ತೋರಿಸಿದ್ರೂ ರಿಪೋರ್ಟ್‌ಗಳೆಲ್ಲವೂ ನಾರ್ಮಲ್ ಅಂತ ವೈದ್ಯರು ಹೇಳ್ತಿದ್ದರಂತೆ, ಹೀಗಾಗಿ ಶಾರದ ತಾಯಿ ಮಧುಶ್ರೀ ಮಗಳು ಗುಣಮುಖಳಾಗಲಿ ಅಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಿಸಿ ಹರಕೆಗಳನ್ನ ಸಹ ಕಟ್ಟಕೊಂಡಿದ್ರು. ಮಾಟ ಮಂತ್ರ ಅಂತ ನಾಟಿ ಔಷಧಿಗಳನ್ನ ಸಹ ಕೊಡಿಸಿದ್ದರಂತೆ, ದೇವರಿಗೆ ಪೂಜೆ ಮಾಡಿಸಿದಾಗ ಕೆಲ ದಿನಗಳು ಹೊಟ್ಟೆ ನೋವು ಇರ್ತಿರಲಿಲ್ಲವಂತೆ, ಆದ್ರೆ ಮತ್ತೆ ಕೆಲ ದಿನಗಳ ನಂತರ ತಡೆಯಲಾರದ ಹೊಟ್ಟೆ ನೋವು, ಚಿತ್ರ ವಿಚಿತ್ರವಾಗಿ ವರ್ತಿಸೋದು, ಕೂಗಾಡೋದು, ರೇಗಾಡೋದು, ಅರಚೋದು ಕಿರುಚಾಡೋದು, ಕೋಪ ಮಾಡಿಕೊಂಡು ಎಲ್ಲರನ್ನ ಗುರಾಯಿಸೋದು ಮಾಡ್ತಿದ್ಲಂತೆ, ಇದ್ರಿಂದ ಮಗಳನ್ನ ಕಾಲೇಜಿಗೆ ಬಿಡಿಸಿ ಮನೆಯಲ್ಲಿ ಇಟ್ಟುಕೊಂಡಿದ್ರು. ಮೊನ್ನೆ ಗುರುವಾರ ತಾಯಿ ಹುಷಾರಿಲ್ಲ ಅಂತ ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ ಶಾರದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಶಾರದಾ ಆತ್ಮಹತ್ಯೆ ಪ್ರಕರಣ ಸಂಬಂಧ ನಂದಿಗಿರಿಧಾಮ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಆದ್ರೆ ಅದೇನ್ ದೆವ್ವದ ಕಾಟವೋ ಏನೋ? ಗೊತ್ತಿಲ್ಲ.. ಆದ್ರೆ ಶಾರದಾ ಪೋಷಕರೇ ಹೇಳೋ ಹಾಗೆ ಆ ಜಾಗದಲ್ಲಿ ಬಿದ್ದಿರೋ 4-5 ಮಂದಿ ಸಹ ಇದೇ ರೀತಿ ಸಾವನ್ನಪ್ಪಿದ್ದಾರಂತೆ, ಯಾರೂ ಸಹ ಉಳಿದಿಲ್ಲ ಅಂತ ಭಯದಿಂದಲೇ ಮಗಳನ್ನ ಕಳೆದುಕೊಂಡಿರೋರು ನೋವು ತೋಡಿಕೊಂಡಿದ್ದಾರೆ.
