ನವದೆಹಲಿ: ಬಲವಾದ ಸಮಸ್ಯೆಗಳನ್ನು ಎತ್ತುವುದು ನಾಟಕವಲ್ಲ. ಸಾರ್ವಜನಿಕರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಅವಕಾಶ ನೀಡದಿರುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಸಂಸದೆ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದರು.
ಅಧಿವೇಶನಕ್ಕೆ ತೆರಳುವ ಮುನ್ನ ಸಂಸತ್ ಭವನ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಐಆರ್, ವಾಯುಮಾಲಿನ್ಯ ಇವತ್ತಿನ ದೊಡ್ಡ ಸಮಸ್ಯೆಗಳು, ಇವುಗಳ ಬಗ್ಗೆ ನಾವು ಚರ್ಚಿಸಬೇಕು ಎಂದರು.
ಸಂಸತ್ತು ಯಾವುದಕ್ಕಾಗಿ ಇದೆ? ಇದು ನಾಟಕ ಅಲ್ಲ, ವಿಷಯಗಳ ಬಗ್ಗೆ ಮಾತನಾಡೋದು, ಸಮಸ್ಯೆಗಳನ್ನ ಎತ್ತುವುದು ನಾಟಕವಲ್ಲ. ಸಾರ್ವಜನಿಕರಿಗೆ ಅಗತ್ಯವಿರುವ ವಿಷಯಗಳ ಬಗ್ಗೆ ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಅವಕಾಶ ನೀಡದಿರುವುದು ನಾಟಕ ಎಂದು ಕುಟುಕಿದರು.
ʻನೋ ಕಾಮೆಂಟ್ಸ್ʼ ಎಂದ ರಾಗಾ
ಇನ್ನೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದರು.
