ಬೆಂಗಳೂರು: ನಾಯಕತ್ವ ಬದಲಾವಣೆ, ಕುರ್ಚಿ ಕಾದಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ನಿಂದ ಕರೆ ಬರ್ತಿದ್ದಂತೆ ಸಿಎಂ-ಡಿಸಿಎಂ ಫುಲ್ ಅಲರ್ಟ್ ಆಗಿದ್ದಾರೆ. ಒಬ್ಬರ ಮನೆಗೆ ಒಬ್ಬರು ಭೇಟಿ ಕೊಟ್ಟು ಬ್ರೇಕ್ಫಾಸ್ಟ್ ಸವಿದು ಮಹತ್ವದ ಮಾತುಕತೆ ನಡೆಸಿ ಗೊಂದಲ-ಗದ್ದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡ್ತಿದ್ದಾರೆ. ಬ್ರೇಕ್ಫಾಸ್ಟ್ ಮೀಟಿಂಗ್ ಬಗ್ಗೆ ಇತ್ತ ಗೃಹ ಸಚಿವ ಪರಮೇಶ್ವರ್ ಮಾತಾಡಿದ್ದು, ಇಬ್ಬರ ಉಪಹಾರ ಕೂಟಕ್ಕೂ ನನ್ನನ್ನ ಕರೆದಿಲ್ಲ. ನಾನೇ ಇಬ್ಬರನ್ನ ಕರೆದು ಬ್ರೇಕ್ಫಾಸ್ಟ್ ಮೀಟಿಂಗ್ ಮಾಡ್ತೀನಿ ಎಂದಿದ್ದಾರೆ.
ನನ್ನನ್ನ ಬ್ರೇಕ್ಫಾಸ್ಟ್ಗೆ ಕರೆದಿಲ್ಲ
ರಾಜ್ಯ ಕಾಂಗ್ರೆಸ್ನಲ್ಲಿ ಬ್ರೇಕ್ಫಾಸ್ಟ್ ಮೀಟಿಂಗ್ ಚರ್ಚೆ ಜೋರಾಗಿದೆ. ಈ ಬಗ್ಗೆ ಬೆಂಗಳೂರಿನ ಸದಾಶಿವನಗರದಲ್ಲಿ ಮಾತಾಡಿದ ಗೃಹ ಸಚಿವ ಪರಮೇಶ್ವರ್ ಅವ್ರು, ಪಕ್ಷದಲ್ಲಿ ಎಲ್ಲವೂ ತಿಳಿಯಾಗಿದೆ. ಈಗ ಸಂತೋಷದ ವಾತಾವರಣವಿದೆ ಎಂದು ಸಂತಸದಿಂದಲೇ ಮಾತಾಡುತ್ತಾ ನನ್ನನ್ನು ಮೀಟಿಂಗ್ಗೆ ಕರೆದಿಲ್ಲ ಎಂದಿದ್ದಾರೆ.
‘ಸಿಎಂ-ಡಿಸಿಎಂನನ್ನು ಬ್ರೇಕ್ಫಾಸ್ಟ್ಗೆ ಕರೀತಿನಿ’
ಸಿಎಂ-ಡಿಸಿಎಂ ಎರಡನೇ ಬ್ರೇಕ್ ಫಾಸ್ಟ್ಗೂ ನನ್ನ ಕರೆದಿಲ್ಲ. ಇಬ್ಬರು ಉಭಯ ನಾಯಕರು ನನ್ನನ್ನು ಕರೆದಿದ್ರೆ ನಾನು ಹೋಗ್ತಿದ್ದೆ. ಅಗತ್ಯ ಬಿದ್ದರೇ ನಮ್ಮ ಮನೆಗೂ ಬ್ರೇಕ್ಫಾಸ್ಟ್ಗೆ ಕರೆಯುತ್ತೇನೆ ಎಂದು ಪರಮೇಶ್ವರ್ ಹೇಳಿದ್ದು, ಗೃಹ ಸಚಿವರ ಮನೆಯಲ್ಲೂ ಮಹತ್ವದ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
‘ಪರಮೇಶ್ವರ್ ಸಿಎಂ ಆಗ್ಲಿ ಅಂತಿದ್ದಾರೆ ಸರ್’
ಪರಮೇಶ್ವರ್ ಅವರು ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದು, ಅವರನ್ನ ಸಿಎಂ ಮಾಡಲಿ ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವ್ರು, ಎಲ್ಲಾ ನಾಯಕರ ಅಭಿಮಾನಿಗಳಿಗೂ ಆಸೆ ಇರುತ್ತೆ ಎಂದಿದ್ದಾರೆ.
ತಮ್ಮ ನಾಯಕ ಸಿಎಂ ಆಗ್ಲಿ ಅಂತ ಬೆಂಬಲಿಗರು ನಮ್ಮನ್ನು ಬೆಂಬಲಿಸುತ್ತಾರೆ. ನನ್ನ ಅಭಿಮಾನಿಗಳಲ್ಲೂ ಅದೇ ಆಸೆ ಇರುತ್ತೆ. ಮುಂದೆ ಸಿಎಂ-ಡಿಸಿಎಂ ಇಬ್ಬರನ್ನೂ ನನ್ನ ಮನೆಗೂ ಬ್ರೇಕ್ ಫಾಸ್ಟ್ಗೆ ಯಾಕೆ ಕರೆಯಬಾರದು ಎಂದು ಪರಮೇಶ್ವರ್ ಹೇಳಿದ್ದಾರೆ. ಗೃಹ ಸಚಿವರ ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪರಮೇಶ್ವರ್ ಮನೆಯಲ್ಲಿ ಬ್ರೇಕ್ ಫಾಸ್ಟ್ ಪಾರ್ಟ್-3?
