Ad image

ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್‌ ಮಾರಾಟಕ್ಕೆ ಬ್ರೇಕ್ – ಲೈಸೆನ್ಸ್ ರದ್ದಿಗೆ ಮುಂದಾದ KMF

Team SanjeMugilu
1 Min Read

ಬೆಂಗಳೂರು: ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್‌ ಮಾರಾಟಕ್ಕೆ ಬ್ರೇಕ್ ಹಾಕಲು ಕೆಎಂಎಫ್  ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಲೈಸೆನ್ಸ್ ರದ್ದು ಮಾಡೋದಾಗಿ ಖಡಕ್ ಎಚ್ಚರಿಕೆ ನೀಡಿದೆ.

ಶುದ್ಧತೆ ಹಾಗೂ ಗುಣಮಟ್ಟಕ್ಕೆ ಹೆಸರಾಗಿರುವ ನಂದಿನಿ ತುಪ್ಪದ ಹೆಸರಿನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಂಧನದ ನಂತರ ಕೆಎಂಎಫ್ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದು, ಮತ್ತಷ್ಟು ಖಡಕ್ ಆಗಿ ನಕಲಿ ಶೂರರ ಹೆಡೆಮುರಿ ಕಟ್ಟಲು ನಿರ್ಧರಿಸಿದೆ.

ಸಿಸಿಬಿ ಪೊಲೀಸರು ಮತ್ತು ಕೆಎಂಎಫ್‌ನ ಜಾಗೃತ ದಳ ನಡೆಸಿದ ಕಾರ್ಯಾಚರಣೆಯಲ್ಲಿ ನಕಲಿ ತುಪ್ಪದ ಜಾಲ ಬಲೆಗೆ ಬಿದ್ದಿತ್ತು. ಕೆಎಂಎಫ್‌ನಿಂದ ನಂದಿನಿ ತುಪ್ಪವನ್ನು ಖರೀದಿಸುತ್ತಿದ್ದ ಆರೋಪಿಗಳು, ಬಳಿಕ ತಮಿಳುನಾಡಿನ ತಿರುಪೂರ್ ಜಿಲ್ಲೆಗೆ ಕಳುಹಿಸಿ ಅಲ್ಲಿನ ಗೋದಾಮು ಒಂದರಲ್ಲಿ ಕಲಬೆರಕೆ ಮಾಡುತ್ತಿದ್ರು. ಪ್ಯಾಕೇಟ್ ಒಂದೇ ರೀತಿಯಿದ್ದ ಕಾರಣ ಅವರ ಮೋಸ ಸಲೀಸಾಗಿ ನಡೆಯುತ್ತಿತ್ತು. ಹೀಗಾಗಿ ಸದ್ಯ ಇವೆಲ್ಲವನ್ನೂ ಸರಿ ಮಾಡಿಕೊಂಡು ಮತ್ತಷ್ಟು ಕಠಿಣ ನಿಯಮಗಳಿಗೆ ಕೆಎಂಎಫ್ ಮುಂದಾಗಿದೆ. ಅದರಲ್ಲಿ ಪ್ರಮುಖವಾಗಿರೋದು ನಂದಿನಿ ಪಾರ್ಲರ್‌ಗಳಲ್ಲಿ ಬೇರೆ ಬೇರೆ ಬ್ರಾö್ಯಂಡ್ ಮಾರಾಟಕ್ಕೆ ಬ್ರೇಕ್ ಹಾಕಲು ಎಚ್ಚರಿಕೆ ನೀಡಿದೆ.

ಈ ಕುರಿತು ಕೆಎಂಎಫ್ ಎಂಡಿ ಶಿವಸ್ವಾಮಿಯವರು ಮಾತನಾಡಿ, ನಂದಿನಿ ಬ್ರಾಂಡ್‌ಗೆ ಕೆಟ್ಟ ಹೆಸರು ತಂದ್ರೇ ಹುಷಾರ್. ಯಾವುದೇ ಕಾರಣಕ್ಕೂ ನಮ್ಮ ಹೆಮ್ಮೆಯ ಬ್ರ್ಯಾಂಡ್‌ಗೆ ಕೆಟ್ಟ ಹೆಸರು ತರಲು ಬಿಡಲ್ಲ. ಈಗಾಗಲೇ ನಾವು ನಮ್ಮ ಪಾರ್ಲರ್‌ಗಳಲ್ಲಿ ಬೇರೆ ಬ್ರ್ಯಾಂಡ್‌ಗಳಿಗೆ ಅವಕಾಶ ನೀಡಿಲ್ಲ. ಒಂದು ವೇಳೆ ಬೇರೆ ಬ್ರ್ಯಾಂಡ್‌ ಮಾರಾಟ ಮಾಡಿದ್ರೇ ಎಚ್ಚರ. ನಂದಿನಿ ಹೊರತುಪಡಿಸಿ ಬೇರೆ ಬ್ರ್ಯಾಂಡ್‌ ಮಾಡಿದ್ದಕ್ಕೆ ಈಗಾಗಲೇ ಕೆಲವು ಕಡೆ ನೋಟಿಸ್ ನೀಡಿದ್ದೇವೆ. ಇನ್ಮೇಲೆ ಸಂಪೂರ್ಣ ಲೈಸೆನ್ಸ್ ರದ್ದು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article