ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಧರ್ಮ ದಂಗಲ್ ಜೋರಾಗಿದೆ. ಹಿಂದೂ ದೇವರ ಶಿಲಾಶಾಸನವಿರುವ ಭೂಮಿಗೆ ವಕ್ಫ್ ಕೊಕ್ಕೆ ಹಾಕಿದೆ. ವಕ್ಫ್ ಬೋರ್ಡ್ ವಿರುದ್ಧ ಜಮೀನು ಕಬಳಿಕೆ ಯತ್ನ ಆರೋಪ ಕೇಳಿಬಂದಿದೆ.
ಕೃಷ್ಣದೇವರಾಯನ ಸಾಮಂತ ಅರಸನೋರ್ವ ಬಳವಳಿಯಾಗಿ ನೀಡಿದ್ದ ಜಮೀನನ್ನು ವಕ್ಫ್ ಬೋರ್ಡ್ ಕಬಳಿಸಲು ಯತ್ನ ಆರೋಪ ಕೇಳಿಬಂದಿದೆ. ವಿಜಯನಗರದ ಅರಸ ಶ್ರೀಕೃಷ್ಣದೇವರಾಯ ಸಾಮಂತ ಅರಸರೊಬ್ರಿಗೆ ವಿಚಿತ್ರ ರೋಗ ಕಾಡುತ್ತಿರುತ್ತದೆ. ಆಗ ಚಿತ್ರದುರ್ಗದ ಶಕ್ತಿ ದೇವತೆ ಏಕನಾಥೇಶ್ವರಿ ಮೊರೆಗೆ ಧಾವಿಸಿದ್ದ ರಾಜನ ರೋಗ ನಿರ್ಮೂಲನೆಯಾಗಿರುತ್ತೆ. ಪರಿಣಾಮ ಇಲ್ಲೊಂದು ಶಿಲಾ ಶಾಸನ ಕೆತ್ತಿಸಿ, ಈ ಜಾಗವನ್ನ ಏಕನಾಥೇಶ್ವರಿಗೆ ಬಳುವಳಿಯಾಗಿ ನೀಡಿರುತ್ತಾರೆಂಬ ಇತಿಹಾಸವಿದೆ.
ಅಂದಿನಿಂದ ಈವರೆಗೆ ಮುಜರಾಯಿ ಇಲಾಖೆ ಅಧೀನದಲ್ಲಿದ್ದ ಏಕನಾಥೇಶ್ವರಿಯ ಶಾಸನ ಇತ್ತೀಚೆಗೆ ವಿನಾಶದ ಅಂಚಿಗೆ ತಲುಪಿದ್ದು, ಧಿಡೀರ್ ಅಂತ ಶಾಸನದ ಮುಂದೆಯೇ ಕಿಡಿಗೇಡಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ರು. ಈ ಅಕ್ರಮದ ವಿರುದ್ಧ ಸತತ ಮೂರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಹಿಂದೂಪರ ಹೋರಾಟಗಾರರು ಜಿಲ್ಲಾಡಳಿತ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಹೀಗಾಗಿ ಈ ಹೋರಾಟಕ್ಕೆ ಮಣಿದ ನಗರಸಭೆ ಅಧಿಕಾರಿಗಳು ಶಾಸನದ ಮುಂಭಾಗದ ಕಟ್ಟಡವನ್ನ ತೆರವುಗೊಳಿಸಿದ್ದಾರೆ. ಆದ್ರೆ ಈ ವಿಚಾರ ಒಳಗೊಳಗೆ ಎರಡು ಧರ್ಮಗಳ ಮಧ್ಯೆ ದೊಡ್ಡ ವಿವಾದ ಸೃಷ್ಟಿಸಿದೆ.
