Ad image

ಕಲಬುರಗಿ ಸೆಂಟ್ರಲ್​ ಜೈಲಿನಲ್ಲಿ ಕೈದಿಗಳ ಬಿಂದಾಸ್​​ ಲೈಫ್​; ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ವೈರಲ್​

Team SanjeMugilu
1 Min Read

ಕಲಬುರಗಿ : ಪರಪ್ಪನ ಅಗ್ರಹಾರ ಜೈಲುಗಳಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುವ ವಿಚಾರ ಭಾರೀ ಸದ್ದು ಮಾಡಿತ್ತು. ಇದೀಗ ಕಲಬುರಗಿ  ಜೈಲಿನಲ್ಲಿ ಕರ್ಮಕಾಂಡ ಬಯಲಾಗಿದೆ. ಬಗೆದಷ್ಟು ಅಕ್ರಮಗಳು ಬಯಲಾಗ್ತಾನೆ ಇದೆ. ಇದೀಗ ಜೈಲಿನಲ್ಲಿ ಕೈದಿಗಳ ಹೈ-ಫೈ ಲೈಫ್ ವಿಡಿಯೋ  ವೈರಲ್ ಆಗಿದೆ.
ಜೈಲಿನ ಕರ್ಮಕಾಂಡ
ಕಲಬುರಗಿ ಸೆಂಟ್ರಲ್ ಜೈಲಿನ ಕರ್ಮಕಾಂಡಗಳು ಒಂದೊಂದಾಗಿಯೇ ಬಯಲಾಗ್ತಿದೆ. ಕೈದಿಗಳಿಗೆ ಜೈಲು ಸೆರೆಮನೆಯಲ್ಲ ಅರಮನೆಯೇ ಆಗಿದೆ. ರೆಸಾರ್ಟ್​​, ಕ್ಲಬ್​​ ಗಳನ್ನು ಕೂಡ ಮೀರಿಸುವಂತಿದೆ ಜೈಲಿನಲ್ಲಿನ ಕೈದಿಗಳ ಬಿಂದಾಸ್ ಲೈಫ್. ಈ ವಿಡಿಯೋ ಇದೀಗ ಫುಲ್ ವೈರಲ್​ ಆಗಿದೆ.
ಕೈದಿಗಳ ಹೈ-ಫೈ ಲೈಫ್ ವಿಡಿಯೋ ವೈರಲ್
ಬ್ರ್ಯಾಂಡೆಡ್ ಎಣ್ಣೆ ಹೊಡೆಯುತ್ತಾ, ಸಿಗರೇಟ್ ಸೇದುತ್ತಾ ಗುಂಪು ಗುಂಪಾಗಿ ಜೈಲಿನಲ್ಲೇ ಕೈದಿಗಳು ಜೂಜಾಟ ಆಡ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಗಿ ಭದ್ರತೆ ಹೊಂದಿರುವ ಜೈಲಿನಲ್ಲಿ ನಿಷೇಧಿತ ವಸ್ತುಗಳು ಹೇಗೆ ಸಪ್ಲೇ ಆಗ್ತಿದೆ ಅನ್ನೋ ಪ್ರಶ್ನೆ ಮೂಡಿದೆ. ಇಷ್ಟೆಲ್ಲಾ ಅಕ್ರಮ ನಡೀತಾ ಇದ್ರು ಜೈಲ್ ಚಿಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಅವರು ಯಾವುದೇ ಕ್ರಮಕೈಗೊಂಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಗೃಹ ಸಚಿವ ಪರಮೇಶ್ವರ್​​ ಪ್ರತಿಕ್ರಿಯೆ
ಕಲಬುರಗಿ ಜೈಲಿನಲ್ಲಿ ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗಿದ್ದು, ಈ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್​ ಅವ್ರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗ್ತಿದೆ. ಹಳೇ ವಿಡಿಯೋನಾ ಅಂತ ಚೆಕ್​​ ಮಾಡ್ತಿದ್ದಾರೆ. ಕೆಲವರು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರಾ ಅಂತ ಪರಿಶೀಲನೆ ನಡೆಸಲಾಗ್ತಿದೆ. ಅದು ನಿನ್ನೆ, ಮೊನ್ನೆ ವಿಡಿಯೋ ಆಗಿದ್ರೆ ತಪ್ಪಿತಸ್ಥರ ವಿರುದ್ದ ಕ್ರಮ ತೆಗೆದುಕೊಳ್ಳೋದಾಗಿ ಗೃಹ ಸಚಿವರು ಹೇಳಿದ್ದಾರೆ.

Share This Article