Ad image

ಬೆಂಗಳೂರಲ್ಲಿ 4 ಫರ್ನಿಚರ್ ಗೋಡೌನ್​​ಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲು

Team SanjeMugilu
1 Min Read

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಲ್ಲಿ  ಭಾರೀ ಅಗ್ನಿ ಅವಘಡ  ಸಂಭವಿಸಿದ್ದು, ಫರ್ನಿಚರ್ ಗೋಡೌನ್​ಗಳು ಬೆಂಕಿಗಾಹುತಿಯಾಗಿದೆ. ಬಾಣಸವಾಡಿ ಸಮೀಪದ ಫರ್ನಿಚರ್ ಗೋಡೌನ್​​ನಲ್ಲಿ  ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಮರದ ಸಾಮಾಗ್ರಿಗಳಾಗಿರುವ ಹಿನ್ನೆಲೆ ಬೆಂಕಿ ಜೋರಾಗಿ ಹೊತ್ತಿ ಉರಿಯುತ್ತಿದೆ. 4 ಅಗ್ನಿಶಾಮಕ ದಳದ  ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆಸಲಾಗ್ತಿದೆ.
4 ಗೋಡೌನ್ ಗಳಿಗೆ ವ್ಯಾಪಿಸಿರುವ ಬೆಂಕಿ
ಕಲ್ಕೆರೆ ಸಮೀಪದ ಗೋಡೌನ್ ಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಆರಂಭದಲ್ಲಿ ಒಂದು ಗೋಡೌನ್​ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ ನಾಲ್ಕು ಗೋಡೌನ್​​ ಗಳಿಗೆ ಆವರಿಸಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ.
ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಅವಘಡ
ನಾಲ್ಕು ಫರ್ನಿಚರ್ ಶೀಟ್ ಫ್ಯಾಕ್ಟರಿ, ಪೊರಕೆ ಗೋಡೌನ್ ಗಳು ಬೆಂಕಿಗಾಹುತಿಯಾಗಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗ್ತಿದೆ. ಪೊರಕೆ ಗೋಡೌನ್ ನಲ್ಲಿ ಇನ್ನೂ ಬೆಂಕಿಯ ಆರ್ಭಟ ಹತೋಟಿಗೆ ಬಂದಿಲ್ಲ. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ.
ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಬೆಂಕಿಗಾಹುತಿ
ನಾಲ್ಕು ಫರ್ನಿಚರ್ ಗೋಡೌನ್​​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ರಾತ್ರಿಯಿಂದಲೂ 4 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಯಾವುದೇ ಪ್ರಾಣಹಾನಿ ಕುರಿತು ವರದಿ ಆಗಿಲ್ಲ.
ಹುಲ್ಲಿನ ಬಣವಗೆ ಕಿಡಿಗೇಡಿಗಳಿಂದ ಬೆಂಕಿ
ಮಂಡ್ಯದಲ್ಲಿ ಹುಲ್ಲಿನ ಬಣವಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, 2 ಎಕರೆಯಲ್ಲಿದ್ದ ಒಣಹುಲ್ಲು ಹೊತ್ತಿ ಉರಿದಿದೆ. ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಶ್ರೀನಿವಾಸ ಗೌಡ ಎಂಬುವರಿಗೆ ಸೇರಿದ ಹುಲ್ಲು ಇದಾಗಿದೆ.
ಜಾನುವಾರ ಮೇವಿಗೆಂದು ಸಂಗ್ರಹಿಸಿದ್ದ 1 ಲಕ್ಷ ಮೌಲ್ಯದ ಒಣಹುಲ್ಲು ಬೆಂಕಿಗಾವುತಿಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article