ಜನವರಿ 25 ರ ತಡರಾತ್ರಿ ವಿಶೇಷ ಭದ್ರತಾ ತಂಡವು ನೆಹ್ದಾನ್ ಗ್ರಾಮದಲ್ಲಿರುವ ಶಂಕಿತ ಝಬರರಾಮ್ ಮೇಘವಾಲ್ ಎಂಬಾತನನ್ನು ಬಂಧಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಗಡಿ ಪ್ರದೇಶದಲ್ಲಿ ಇ-ಮಿತ್ರ ಕೇಂದ್ರವನ್ನು ಈತ ನಡೆಸುತ್ತಿದ್ದ. ಪಾಕಿಸ್ತಾನಿ ಮಹಿಳಾ ನಿರ್ವಾಹಕಿಯೊಂದಿಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹನಿಟ್ರ್ಯಾಪ್ ಮಾಡಿ ಬೇಹುಗಾರಿಕೆಗೆ ಬಳಸಿಕೊಂಡಿರುವ ಅನುಮಾನಗಳು ವ್ಯಕ್ತವಾಗಿವೆ.
ಸಿಐಡಿ (ಗುಪ್ತಚರ) ತಂಡಗಳು ಮೇಘವಾಲ್‌ನನ್ನು ವಿಚಾರಣೆಗಾಗಿ ಜೈಪುರಕ್ಕೆ ಕರೆದೊಯ್ದಿವೆ. ಆತನ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆತ ಕಳೆದ ನಾಲ್ಕು ವರ್ಷಗಳಿಂದ ಗ್ರಾಮದಲ್ಲಿ ಇ-ಮಿತ್ರ ಕೇಂದ್ರವನ್ನು ನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಹಣಕ್ಕಾಗಿ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾನೆಯೇ ಅಥವಾ ಒತ್ತಡ, ಬಲವಂತದಿಂದ ವರ್ತಿಸಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
