Ad image

7 ಸಾವಿರ ಆಸ್ತಿಗಳ ಹರಾಜಿಗೆ ಮುಂದಾದ ಜಿಬಿಎ

Team SanjeMugilu
0 Min Read

ಬೆಂಗಳೂರು: ತೆರಿಗೆ ಬಾಕಿ ಪಾವತಿಸದ ಮಾಲೀಕರ 7 ಸಾವಿರ ಆಸ್ತಿಗಳನ್ನು  ಹರಾಜು ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ 5 ನಗರ ಪಾಲಿಕೆಗಳಲ್ಲಿ ಒಟ್ಟು 437 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ತೆರಿಗೆ ಬಾಕಿಯಿದೆ.

ತೆರಿಗೆ ಪಾವತಿಸದ್ದಕ್ಕೆ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಜಾರಿ ಮಾಡಲಾಗಿತ್ತು. ನೋಟಿಸ್‌ ಜಾರಿ ಮಾಡಿಯೂ ತೆರಿಗೆ ಪಾವತಿಸದ್ದಕ್ಕೆ ಜಪ್ತಿ ಮಾಡುವ ಆದೇಶ ಪ್ರಕಟವಾಗಿದೆ.
ಜಪ್ತಿ ಆದೇಶಗಳ ಬಳಿಕವೂ ತೆರಿಗೆ ಪಾವತಿಸಿದೇ ಇದ್ದರೆ ಫೆಬ್ರವರಿ 17ರಂದು ಜಂಟಿ ಆಯುಕ್ತರ ಕಚೇರಿಗಳಲ್ಲಿ ಈ ಜಾಗಗಳಲ್ಲಿ ಹರಾಜು ಹಾಕಲಾಗುತ್ತದೆ.

Share This Article