Ad image

15 ವರ್ಷದ ಬಾಲಕನಿಗೆ ಮದ್ಯ ಕುಡಿಸಿದ ಕಂಪನಿ; 7ನೇ ಮಹಡಿಯಿಂದ ಬಿದ್ದು ಅಪ್ರಾಪ್ತ ಸಾವು!

Team SanjeMugilu
1 Min Read

ಬೆಂಗಳೂರು: ನಗರದ ಸಂಸ್ಥೆಯೊಂದು ಅಪ್ರಾಪ್ತ ಬಾಲಕರಿಗೆ ಮದ್ಯ ಕುಡಿಸಿದ್ದು, ಅಪ್ರಾಪ್ತನೊಬ್ಬ ತನ್ನ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಉರುಳಿ ಬಿದ್ದು ಸಾವನ್ನಪ್ಪಿರುವ​ ಪ್ರಕರಣ ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಮೃತ ಬಾಲಕನ ಪೋಷಕರು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿದಂತೆ ಕಳೆದ ತಿಂಗಳು ಈ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.

ಜೆಜೆ ಆ್ಯಕ್ಟ್ ಅಡಿ ಪ್ರಕರಣ ದಾಖಲು
ಜನವರಿ 31ರ ರಾತ್ರಿ ಸುಮಾರು 9 ಗಂಟೆ 40 ನಿಮಿಷಕ್ಕೆ ಈ ಘಟನೆ ನಡೆದಿದ್ದು, ಡಾ. ವಿಷ್ಣುವರ್ಧನ್ ರಸ್ತೆಯ ಅಪಾರ್ಟ್‌ಮೆಂಟ್‌ನ ನಿವಾಸಿಯಾಗಿರುವ ಮೃತನ ಪಾಲಕರು ಅದೇ ದಿನ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ನಂತರ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಹಲವು ಆಯಾಮಗಳನ್ನಿಟ್ಟುಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸತ್ಯಾಂಶ ಹೊರಬಂದಿದ್ದು, 15 ವರ್ಷದ ಬಾಲಕನಿಗೆ ಸಂಸ್ಥೆಯೊಂದು ಸಿರಗೇಟ್ ಮತ್ತು ಮದ್ಯಪಾನ ಮಾಡಿಸಿದೆ ಎಂದು ತಿಳಿದುಬಂದಿದೆ.

ಮೃತ ಬಾಲಕ ಮತ್ತು ಸ್ನೇಹಿತರು ಸ್ಥಳೀಯ ಕಂಪನಿಯಲ್ಲಿದ್ದಾಗ ಈ ಕೃತ್ಯ ನಡೆದಿದ್ದು, ಸಂಸ್ಥೆಯು ಅಪ್ರಾಪ್ತರಿಗೆ ಮದ್ಯ ಕುಡಿಸಿರುವ ಆರೋಪದ ಮೇಲೆ, ಕಂಪನಿಯ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ (JJ Act) ಮತ್ತು ಕರ್ನಾಟಕ ಮದ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ANI ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು, ಪೋಸ್ಟ್ ಇಲ್ಲಿದೆ.

ಸಾರ್ವಜನಿಕರಿಗೆ ಖಾಕಿ ವಾರ್ನಿಂಗ್
ಪೊಲೀಸರು ಪ್ರಕರಣದ ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದು, ಸಂಸ್ಥೆಯ ಮೇಲಿನ ಕ್ರಮ ಕೈಗೊಳ್ಳುವುದರ ಜೊತೆಗೆ ಕೃತ್ಯವೆಸಗಿದವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಸಿದ್ದಾರೆ.

Share This Article