Ad image

ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ಲೋಪ – ರನ್‌ವೇಗೆ ನುಗ್ಗಿದ ಬೀದಿನಾಯಿಗಳು!

Team SanjeMugilu
0 Min Read

ಬೆಂಗಳೂರು: ನಗರದ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ  ಭದ್ರತಾ ಲೋಪವಾಗಿದೆ. ಏರ್‌ಪೋರ್ಟ್‌ನ ರನ್‌ವೇಯಲ್ಲಿ ಬೀದಿನಾಯಿಗಳು  ಓಡಾಡಿವೆ.

ಎರಡು ಬೀದಿ ನಾಯಿಗಳು ಟರ್ಮಿನಲ್ 2ರ ಹೊಸ ರನ್‌ವೇಯಲ್ಲಿ ಓಡಾಡಿವೆ. ಅಷ್ಟೇ ಅಲ್ಲದೇ ವಿಮಾನಗಳ ಬಳಿಯೂ ಹೋಗಿ ಸುತ್ತಾಡಿವೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ರನ್ ವೇಯಲ್ಲಿ ವಿಮಾನಗಳಿರದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ

ಬೀದಿ ನಾಯಿಗಳನ್ನು ಕಂಡು ಕೂಡಲೇ ಅಲರ್ಟ್ ಆದ ವಿಮಾನ ನಿಲ್ದಾಣದ ಸಿಬ್ಬಂದಿ ಹರಸಾಹಸ ಪಟ್ಟು ಸೆರೆ ಹಿಡಿದಿದ್ದಾರೆ.

Share This Article