Ad image

ಕುಡಿಯೋದು ಬಿಡು ಎಂದಿದ್ದಕ್ಕೆ 11 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ!

Team SanjeMugilu
1 Min Read

ಯಾದಗಿರಿ: ಮದ್ಯ ಕುಡಿಯುವುದನ್ನು ಬಿಡು ಎಂದಿದಕ್ಕೆ ಮಹಿಳೆಯೊಬ್ಬಳು ತನ್ನ ಮಗಳನ್ನೇ ಕತ್ತು ಹಿಸುಕಿ ಕೊಂದ ಘಟನೆ ಯಾದಗಿರಿಯ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.

ಕೊಲೆಯಾದ ಬಾಲಕಿಯನ್ನು ಪ್ರತಿಭಾ (11) ಎಂದು ಗುರುತಿಸಲಾಗಿದೆ. ಆಕೆಯ ತಾಯಿ ನಿರ್ಮಲಾ ಕೊಲೆಗೈದ ಆರೋಪಿಯಾಗಿದ್ದಾಳೆ. ಮಗಳನ್ನು ಕೊಲೆಗೈದು ಆತ್ಮಹತ್ಯೆಯ ಕತೆ ಕಟ್ಟಿದ್ದಳು. ಜ್ಯೂಸ್ ಕುಡಿಯಲು 15 ರೂ. ಹಣ ಕೇಳಿದ್ದಳು. ಹಣ ಕೊಡಲು ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದಳು. ಹತ್ಯೆ ಬಳಿಕ ಕುತ್ತಿಗೆಗೆ ಸೀರೆ ಕಟ್ಟಿದ್ದಳು ಎಂದು ತಿಳಿದು ಬಂದಿದೆ.

ಮದ್ಯ ಸೇವನೆ ಮಾಡಿ ಹಣ ಖರ್ಚು ಮಾಡಿದರೆ ನಮಗೆ ಊಟಕ್ಕೆ ತೊಂದರೆಯಾಗುತ್ತದೆ. ನೀನು ಕುಡಿದು ಸತ್ತರೇ ನಮ್ಮನ್ನು ನೋಡಿಕೊಳ್ಳುವರು ಯಾರು? ಅಮ್ಮ ಕುಡಿಯುವುದನ್ನು ಬಿಡು ಎಂದು ಪ್ರತಿಭಾ ಹೇಳಿದ್ದಳು. ಇದರಿಂದ ನಿರ್ಮಲಾ ಕೋಪಗೊಂಡು ಕೊಲೆ ಮಾಡಿದ್ದಳು. ಹಲವು ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ನಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Share This Article