Ad image

ಅಮೆರಿಕದ ರಕ್ಷಣಾ ಸಂಸ್ಥೆಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ನಾಲ್ಕು ಪಟ್ಟು ಹೆಚ್ಚಿಸುವಂತೆ ಟ್ರಂಪ್ ಆದೇಶ

Team SanjeMugilu
1 Min Read

ವಾಷಿಂಗ್ಟನ್: ಅಮೆರಿಕ  – ಇರಾನ್ ನಡುವಿನ ಯುದ್ಧ 8ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧದ ನಡುವೆಯೇ ಉತ್ಕೃಷ್ಟ ದರ್ಜೆಯ ಶಸ್ತ್ರಾಸ್ತ್ರಗಳ  ಉತ್ಪಾದನೆಯನ್ನು 4 ಪಟ್ಟು ಹೆಚ್ಚಿಸುವಂತೆ ಕಂಪನಿಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶಿಸಿದ್ದಾರೆ.

‘ಉತ್ಕೃಷ್ಟ ದರ್ಜೆಯ’ ಶಸ್ತ್ರಾಸ್ತ್ರಗಳ ಉತ್ಪಾದನೆ ಬಗ್ಗೆ ಟ್ರಂಪ್ ಶುಕ್ರವಾರ ದೇಶದ ಪ್ರಮುಖ ರಕ್ಷಣಾ ಉತ್ಪಾದನಾ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಮುಖ ಶಸ್ತ್ರಾಸ್ತ್ರ ಕಂಪನಿಗಳಿಗೆ ಉತ್ಪಾದನೆ ಹೆಚ್ಚಳಕ್ಕೆ ನಿರ್ದೇಶನ ನೀಡಲಾಗಿದೆ. ಈ ನಿರ್ದೇಶನಕ್ಕೆ ಕಂಪನಿಗಳು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ.

ಹಲವಾರು ಹೊಸ ಉತ್ಪಾದನಾ ಘಟಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಅಮೆರಿಕವು ಪ್ರಸ್ತುತ ಉನ್ನತ ಮತ್ತು ಮಧ್ಯಮ ದರ್ಜೆಯ ಯುದ್ಧ ಸಾಮಗ್ರಿಗಳ ತಯಾರು ಮಾಡುತ್ತಿದೆ. ಇವುಗಳನ್ನು ಇರಾನ್ ಮತ್ತು ವೆನೆಜುವೆಲಾದಲ್ಲಿ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ನಿಯೋಜಿಸಲಾಗಿತ್ತು. ಇನ್ನೂ ದೀರ್ಘಕಾಲದ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಉತ್ಪಾದನೆ ಹೆಚ್ಚಳಕ್ಕೆ ಆದೇಶಿಸಲಾಗಿದೆ.

ಇದರಿಂದ ಯುದ್ಧ ಇನ್ನಷ್ಟು ಸುಧೀರ್ಘವಾಗಲಿದೆ ಎಂಬ ಆತಂಕ ಜಾಗತಿಕವಾಗಿ ಕಾಡತೊಡಗಿದೆ. ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಸೌದಿ ಕಚ್ಚಾತೈಲ ನಿಕ್ಷೇಪಗಳನ್ನು ಇರಾನ್ ಟಾರ್ಗೆಟ್‌ ಮಾಡಿದೆ. ಶೈಬಾ ತೈಲ ನಿಕ್ಷೇಪದ ಕಡೆಗೆ ಇರಾನ್‌ ಡ್ರೋನ್‌ ದಾಳಿಯನ್ನು ಸೌದಿ ವಿಫಲಗೊಳಿಸಿದೆ. ಇರಾಕ್‍ನ ದಕ್ಷಿಣ ಬಸ್ರಾ ಪ್ರಾಂತ್ಯದಲ್ಲಿರುವ ತೈಲ ನಿಕ್ಷೇಪಗಳು ಮೇಲೂ ಇರಾನ್ ದಾಳಿ ಮಾಡಿದೆ.‌

ಡ್ರೋನ್ ದಾಳಿಯಿಂದ ಸಮಸ್ಯೆ ಎದುರಿಸುತ್ತಿರುವ ಅಮೇರಿಕ, ದಾಳಿ ತಡೆಯಲು ಸುಧಾರಿತ ಡ್ರೋನ್ ವಿರೋಧಿ ರಕ್ಷಣಾ ವ್ಯವಸ್ಥೆ ಯುಕ್ರೇನ್ ಮೊರೆ ಹೋಗಿದೆ. ಮಧ್ಯಪ್ರಾಚ್ಯದಲ್ಲಿ ಸಂಘರ್ಷದಲ್ಲಿ ರಷ್ಯಾ ಡ್ರೋನ್‍ಗಳನ್ನು ಯುಕ್ರೇನ್ ಯಶಸ್ವಿಯಾಗಿ ತಡೆದಿತ್ತು. ಈ ಹಿನ್ನೆಲೆ ಅಮೆರಿಕ ಯುಕ್ರೇನ್ ಮೊರೆ ಹೋಗಿದೆ.

Share This Article