Ad image

ನಾವು ಈಗಾಗಲೇ ಗೆದ್ದಿದ್ದೇವೆ, ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು: ಟ್ರಂಪ್‌

Team SanjeMugilu
1 Min Read

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಶೀಘ್ರದಲ್ಲೇ ಕೊನೆಗೊಳ್ಳಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಮ್ಮ ಮಿಲಿಟರಿ ಕಾರ್ಯಾಚರಣೆ ಇರಾನ್‌ನ ನೌಕಾಪಡೆ, ಡ್ರೋನ್ ಮತ್ತು ಕ್ಷಿಪಣಿ ಸಾಮರ್ಥ್ಯಗಳ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿದೆ. ನಾವು ಈಗಾಗಲೇ ಹಲವು ವಿಧಗಳಲ್ಲಿ ಗೆದ್ದಿದ್ದೇವೆ, ಆದರೆ ಸಂಪೂರ್ಣ ಗೆದ್ದಿಲ್ಲ ಎಂದಿದ್ದಾರೆ.

ಕಾರ್ಯಾಚರಣೆಯ ಸಮಯದಲ್ಲಿ, ಇರಾನ್‌ನ ನೌಕಾಪಡೆಯು ಭಾರೀ ನಷ್ಟ ಅನುಭವಿಸಿದೆ. ಇರಾನ್‌ನ ಅನೇಕ ಮಿಲಿಟರಿ ನೆಲೆಗಳು ನಾಶವಾಗಿವೆ. ಅಮೆರಿಕವು ತನ್ನ ಉದ್ದೇಶಗಳನ್ನು ವೇಗವಾಗಿ ಸಾಧಿಸುತ್ತಿದೆ. ಇದರಿಂದ ಯುದ್ಧವು ನಿರ್ಣಾಯಕ ಹಂತದತ್ತ ಸಾಗುತ್ತಿದೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅಮೆರಿಕ ಅನುಮತಿಸುವುದಿಲ್ಲ ಎಂದಿದ್ದಾರೆ.

ಈ ಹಂತದ ಯುದ್ಧದಿಂದ ಇರಾನ್‌ನ ಹಿಂದೆ ಸರಿಯುವಂತೆ ಕಾಣುತ್ತಿಲ್ಲ. ಯುದ್ಧ ನಿಲ್ಲಿಸುವ ಹಂತಕ್ಕೆ ಬಂದರೂ, ಇರಾನ್ ದಾಳಿಯ ಭೀತಿಯಿಂದ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದೆ. ಸಂಪೂರ್ಣವಾಗಿ ಮತ್ತು ನಿರ್ಣಾಯಕವಾಗಿ ಸೋಲಿಸಲ್ಪಡುವವರೆಗೆ ಯುದ್ಧ ಮುಂದುವರಿಯುವ ಸಾಧ್ಯತೆ ಇದೆ.ಟ್ರಂಪ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌ ಯುದ್ಧ ಕೊನೆಗೊಳಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು ಎಂದು ಹೇಳಿದೆ. ಅಲ್ಲದೇ ಅಮೆರಿಕ ಮತ್ತು ಇಸ್ರೇಲ್ ದಾಳಿ ಮುಂದುವರಿದರೆ ಟೆಹ್ರಾನ್ ಪ್ರದೇಶದಿಂದ ಒಂದು ಲೀಟರ್ ತೈಲವನ್ನು ರಫ್ತು ಮಾಡಲು ಅನುಮತಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಸಂಘರ್ಷದ ಪರಿಣಾಮ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 120 ಡಾಲರ್ ದಾಟಿದೆ. ಯುದ್ಧ ಮುಂದುವರಿದರೆ ಮತ್ತಷ್ಟು ಬೆಲೆ ಏರಿಕೆ ಸಾಧ್ಯತೆ ಸಹ ಇದೆ.

Share This Article