ಬೆಂಗಳೂರು: ಇರಾನ್ ಹಾಗೂ ಇಸ್ರೇಲ್, ಅಮೆರಿಕಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಈಗ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ. ಪರಿಸ್ಥಿತಿ ಹದಗೆಟ್ಟರೆ ಮತ್ತು ತೈಲ ಉತ್ಪಾದನೆ ಅಥವಾ ಪೂರೈಕೆಯಲ್ಲಿ ಪ್ರಮುಖ ಅಡಚಣೆಗಳು ಉಂಟಾದ್ರೆ, ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ $100 ಕ್ಕಿಂತ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಇದು ಜಾಗತಿಕ ಆರ್ಥಿಕತೆಯ ಮೇಲೆ ಹಾಗೂ ಭಾರತದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಲ್ಲ ಎಂದು ಭಾರತ ಸರ್ಕಾರ ಹೇಳಿದ್ರೂ, ದರ ಏರಿಕೆ ಬಗ್ಗೆ ಚಿಂತನೆ ನಡೆಯುತ್ತಿದೆ. ಉದ್ವಿಗ್ನತೆ ಮುಂದುವರೆದ್ರೆ ಪೆಟ್ರೋಲ್, ಡಿಸೇಲ್ ಕೆಲ ಗಂಟೆಗಳಲ್ಲೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗೋ ಸಾಧ್ಯತೆ ಇದೆ.
ಯುದ್ಧದ ಎಫೆಕ್ಟ್, ಸಾಲು ಸಾಲು ಬೆಲೆ ಏರಿಕೆ
ಮಧ್ಯಪ್ರಾಚ್ಯದಲ್ಲಿ ಯುದ್ಧದ ಎಫೆಕ್ಟ್‌ನಿಂದ ಬೆಂಗಳೂರಿನಲ್ಲೂ ವ್ಯಾಪಾರ-ವ್ಯವಹಾರಕ್ಕೆ ಭಾರೀ ಪೆಟ್ಟು ಬಿದ್ದಿದೆ. ಗ್ಯಾಸ್ ಪೂರೈಕೆ ಅಭಾವದಿಂದಾಗಿ ಹೋಟೆಲ್ಗಳು ಬಂದ್ ಆಗ್ತಿವೆ. ಜೊತೆಗೆ ಶೀಘ್ರದಲ್ಲೇ ಸಿಟಿ ಜನರಿಗೆ ಸಾಲು ಸಾಲು ದರ ಏರಿಕೆ ಬಿಸಿ ತಟ್ಟಲಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಸಿದ್ಧತೆ
ಪಶ್ಚಿಮ ಏಷ್ಯಾದಲ್ಲಿ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಮೂರುವರೆ ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಯುದ್ಧದ ಸಮಯದಲ್ಲಿ, ಕೇವಲ 10 ದಿನಗಳಲ್ಲಿ ಕಚ್ಚಾ ತೈಲವು ಸುಮಾರು 48% ರಷ್ಟು ಹೆಚ್ಚಾಗಿದೆ. ಆದ್ರೂ ಭಾರತ ಸರ್ಕಾರವು ನಮ್ಮಲ್ಲಿ ಸಾಕಷ್ಟು ತೈಲವಿದೆ ಬೆಲೆ ಏರಿಕೆ ಮಾಡಲ್ಲ ಅಂತಿದ್ರೂ ಏರಿಕೆ ಚರ್ಚೆ ನಡೆಯುತ್ತಿದೆ ಎಂದು ವರದಿ ಆಗಿದೆ.
20ರೂ ಏರಿಕೆಯಾಗುತ್ತಾ ಪೆಟ್ರೋಲ್-ಡೀಸೆಲ್?
ಈ ಬಾರಿ ಒಂದಲ್ಲ, ಎರಡಲ್ಲ ಬರೋಬ್ಬರಿ 20 ರೂಪಾಯಿ ಗಿಂತಲೂ ಹೆಚ್ಚು ದರ ಏರಿಕೆಯಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಪೆಟ್ರೋಲ್ ಪ್ರತಿ ಲೀ. 22 ರೂ ವರೆಗೆ ಡೀಸೆಲ್ ಲೀಟರ್ಗೆ 24 ರೂ ದರ ವರೆಗೆ ಏರಿಕೆ ಸಾಧ್ಯತೆ ಇದೆ ಎಂದು ಹೇಳಲಾಗ್ತಿದ್ದು, ಎಲ್ಲಾ ಡಿಸ್ಟ್ರಿಬ್ಯೂಟರ್ಸ್ಗಳಿಗೆ ಪತ್ರ Indian Oil corporation limited ಪತ್ರ ಬರೆದಿದೆ.
ಯಾವುದೇ ಕ್ಷಣದಲ್ಲೂ ಏರಬಹುದು ಬೆಲೆ!
ಯುದ್ಧ ಎಫೆಕ್ಟ್‌ನಿಂದ ಕ್ರೂಡ್ ಆಯಿಲ್ ದರ 60% ಏರಿಕೆ ಆಗಿದೆ. USD 70 ರಿಂದ USD 115 ಒಂದು ಬ್ಯಾರೆಲ್ ಆಗಿದೆ. ಹೀಗಾಗಿ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಯಾವ ಕ್ಷಣದಲ್ಲಿ ಆದ್ರೂ ದರ ಏರಿಕೆ ಮಾಡಲಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ದರ ಏರಿಕೆ ಆದ್ರೆ. ಪೆಟ್ರೋಲ್ ದರ 125 ರೂ. ಡಿಸೇಲ್ ದರ 115 ರೂ ಆಗಬಹುದು. ಸದ್ಯ ಪೆಟ್ರೋಲ್ ಬೆಲೆ 103 ರೂ. (102.96) ಡೀಸೆಲ್ ಬೆಲೆ 91 ರೂ. (91.04) ಇದೆ.
ಗ್ಯಾಸ್ ಸಿಗ್ತಿಲ್ಲ, ಅಡುಗೆ ಎಣ್ಣೆ ಕೂಡ ದುಬಾರಿ; ಇತ್ತ ಕೆಲ ಗಂಟೆಗಳಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!?
