ನವದೆಹಲಿ: ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಹಣ ವರ್ಗಾವಣೆ ಪ್ರಕರಣದ ಜಾರಿ ನಿರ್ದೇಶನಾಲಯತನಿಖೆಗೆ ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹಾಜರಾಗಿದ್ದಾರೆ.
ದೆಹಲಿಯ ಇ.ಡಿ ಕಚೇರಿಗೆ ವಕೀಲರೊಂದಿಗೆ ರಾಬಿನ್ ಉತ್ತಪ್ಪ ಹಾಜರಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೇಳಿಕೆ ದಾಖಲಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹಾಗೂ ನಟ ಸೋನು ಸೂದ್‌ಗೆ ಸಹ ವಿಚಾರಣೆ ಹಾಜರಾಗುವಂತೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು. ಸೆ.23 ರಂದು ಯುವರಾಜ್ ಸಿಂಗ್ ಹಾಗೂ ಸೆ.34 ರಂದು ನಟ ಸೋನು ಸೂದ್ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜ್ರಾ, ಕ್ರಿಕೆಟಿಗ ಶಿಖರ್ ಧವನ್, ಸುರೇಶ್ ರೈನಾ ಈ ಪ್ರಕರಣದ ಇ.ಡಿ ತನಿಖೆಯನ್ನು ಎದುರಿಸಿದ್ದರು.