Ad image

ಆರ್​​ಎಸ್ಎಸ್ ವಿರುದ್ಧ ತೊಡೆ ತಟ್ಟಿದ ಭೀಮ್ ಆರ್ಮಿ; ಚಿತ್ತಾಪುರದಲ್ಲಿ ಕೇಸರಿ, ನೀಲಿ ಸಂಘರ್ಷ

Team SanjeMugilu
1 Min Read

ಕಲಬುರಗಿ : ಕಲಬುರಗಿಯ ಚಿತ್ತಾಪುರದಲ್ಲಿ ಆರ್​​ಎಸ್​ಎಸ್​ ಪಥಸಂಚಲನದ ಜಟಾಪಟಿ ಜೋರಾಗಿದೆ. ಆರ್‌ಎಸ್‌ಎಸ್‌ ಪಥಸಂಚನಕ್ಕೆ ಪ್ರತಿಯಾಗಿ ಜೈ ಭೀಮ್‌ ಸಂಘಟನೆಯಿಂದಲೂ ಪಥಸಂಚಲನಕ್ಕೆ ಮುಂದಾಗಿದೆ. ಸಚಿವ ಪ್ರಿಯಾಂಕ ಖರ್ಗೆ  ಪ್ರತಿನಿಧಿಸುವ ಚಿತ್ತಾಪುರ ಕ್ಷೇತ್ರದಲ್ಲಿ RSS ಪಥ ಸಂಚಲನಕ್ಕೆ ಮನವಿ ಸಲ್ಲಿಸಿದ ಬೆನ್ನಲ್ಲೇ ದಲಿತ ಸಂಘಟನೆಗಳು  ಅರ್ಜಿ ಸಲ್ಲಿಸಿದ್ದು, ನವೆಂಬರ್​ 2ರಂದೇ ಪಥಸಂಚಲನಕ್ಕೆ ಪಟ್ಟು ಹಿಡಿದಿದ್ದಾರೆ.
ಖರ್ಗೆ ತವರಲ್ಲಿ ಗುಡುಗಲು ಆರ್​ಎಸ್​ಎಸ್​ ರೆಡಿ
ಚಿತ್ತಾಪುರದಲ್ಲಿ ಪಥಸಂಚಲನಕ್ಕೆ RSS ಸಿದ್ಧತೆ ಮಾಡಿಕೊಂಡಿದ್ದು, ನವೆಂಬರ್ 2ರಂದೇ ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ನಡೆಸಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ ಸಿಡಿದೆದ್ದ ಕೇಸರಿ ಪಡೆ, ಕೋರ್ಟ್ ಮೆಟ್ಟಿಲೇರಿ ಪ್ರಿಯಾಂಕ್ ಖರ್ಗೆ ತವರಲ್ಲೇ ಗುಡುಗೋಕೆ ಗ್ರೀನ್ ಸಿಗ್ನಲ್ ಪಡೆಯಿತು.
ಭೀಮ್ ಆರ್ಮಿ ಪಥಸಂಚಲನಕ್ಕೆ ಪಟ್ಟು
ಇತ್ತ ಆರ್​ಎಸ್​ಎಸ್ ವಿರುದ್ಧ ತೊಡೆ ತಟ್ಟಿರುವ ಭೀಮ್ ಆರ್ಮಿ, ನವೆಂಬರ್ 2 ರಂದೇ ಪಥಸಂಚಲನಕ್ಕೆ ಪಟ್ಟು ಹಿಡಿದಿದೆ. ಭೀಮ್ ಆರ್ಮಿ ಸದಸ್ಯರು ಕಾಕಿ, ಬಿಳಿ, ಕಪ್ಪು ಸಮವಸ್ತ್ರಕ್ಕೆ ಪ್ರತಿಯಾಗಿ ಬ್ಲ್ಯೂಬಾಯ್​ ಗಳ ಸಮವಸ್ತ್ರದಲ್ಲಿ ಟಾಂಗ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೇಸರಿ, ನೀಲಿ ವಸ್ತ್ರದಾರಿಗಳ ಸಂಘರ್ಷ
ಅಕ್ಟೋಬರ್ 24ರ ಕೋರ್ಟ್ ನಿರ್ದೇಶನಕ್ಕೆ ಕಾದಿರುವ ಕೇಸರಿ, ನೀಲಿ ಸಮ ವಸ್ತ್ರದಾರಿಗಳು ಘರ್ಜಿಸೋಕೆ ಶುರು ಮಾಡಿದ್ದಾರೆ. ಚಿತ್ತಾಪುರದಲ್ಲಿ ಶುರುವಾಗುತ್ತೆ ಕೇಸರಿ, ನೀಲಿಯ ಸಂಘರ್ಷ ಜೋರಾಗಿದ್ದು. ಚಿತ್ತಾಪುರದ ಪಥಸಂಚಲನದಲ್ಲಿ ಭೀಮ್ ಆರ್ಮಿಯ ಸಂಸ್ಥಾಪಕ ಚಂದ್ರಶೇಖರ್ ಆಜಾದ್ ಭಾಗಿಯಾಗಿದ್ರು.

Share This Article