Ad image

ಅಯ್ಯಪ್ಪನ ಸನ್ನಿಧಿಗೆ ಮಿತಿಮೀರಿದ ಭಕ್ತಸಾಗರ; ಊಟ ಇಲ್ಲ.. ನೀರೂ ಸಿಗ್ತಿಲ್ಲ.. ಗೋಳಾಟ!

Team SanjeMugilu
2 Min Read

ಶಬರಿಮಲೆ, ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರ. ಹಿಂದೂಗಳ ಪ್ರಸಿದ್ಧ ಯಾತ್ರಾಸ್ಥಳ . ಕೋಟ್ಯಾನುಕೋಟಿ ಭಕ್ತರ ಆರಾಧ್ಯಮೂರ್ತಿಯ ಪವಿತ್ರ ಸ್ಥಾನ. ಶಬರಿಮಲೆ ಅಂದ್ರೆ  ಅದೆಷ್ಟೋ ಭಕ್ತರು ಮನಸ್ಸಿಗೆ ನೆಮ್ಮದಿ ಕೇಂದ್ರವಾಗಿದೆ. ಭಕ್ತಿಯ ಬೀಡಾಗಿದೆ, ಸದ್ಯ ಇದೇ ಸನ್ನಿಧಿಗೆ ಭಕ್ತರ ಹೊಳೆ ಹರಿದು  ಬರ್ತಿದೆ. ಹಿಂದೆಂದೂ ಕಾಣದ ಜನಸಾಗರಕ್ಕೆ ಸಾಕ್ಷಿಯಾಗಿದೆ.
ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ಮಂಡಲ ಪೂಜೆ ಆರಂಭವಾಗಿದೆ. ಕಳೆದ ಭಾನುವಾರದಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಓಪನ್‌ ಮಾಡ್ಲಾಗಿದೆ. ಹೀಗಾಗಿ ಶಬರಿಮಲೆ ಅಯ್ಯಪ್ಪ ಸನ್ನಿಧಿಗೆ ಭಕ್ತಸಾಗರವೇ ಹರಿದುಬರ್ತಿದೆ. ಕಣ್ಣು ಹಾಯಿಸಿದಷ್ಟು ಸ್ವಾಮಿ ಭಕ್ತರೇ ಕಾಣ್ತಿದ್ದು, 3 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಭಕ್ತರು ದರ್ಶನ ಪಡೆದಿದ್ದಾರೆ. ಸದ್ಯ ದರ್ಶನಕ್ಕಾಗಿ 14 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಜ್ಜೆ ಇಡೋದಕ್ಕೂ ಮಹಿಳೆಯರು, ಮಕ್ಕಳು ಒದ್ದಾಡ್ತಿದ್ದಾರೆ. ಕುಡಿಯಲು ನೀರಿಲ್ದೇ, ಊಟ ಸಿಗದೆ, ಸ್ವಚ್ಛತೆ ಇಲ್ಲದೇ ಪರದಾಡ್ತಿದ್ದಾರೆ. ನೀಲ್‌ಕಲ್‌ನಲ್ಲಿ ಭಕ್ತರ ವಾಹನಗಳು ಪಾರ್ಕಿಂಗ್‌ನಲ್ಲೇ ಜಾಮ್ ಆಗಿವೆ. ವಾಹನಗಳಲ್ಲಿ ತೆರಳಿರುವ ಭಕ್ತರು ಪಾರ್ಕಿಂಗ್‌ಗಾಗಿಯೇ ಒಂದೆರಡು ತಾಸು ಹುಡುಕುವ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಸರತಿ ಸಾಲಿನಲ್ಲಿ ಉಂಟಾದ ನೂಕುನುಗ್ಗಲು ಮತ್ತು ಉಸಿರಾಟದ ಸಮಸ್ಯೆಯಿಂದಾಗಿ 58 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ.
ಕರ್ನಾಟಕದಿಂದ್ಲೂ ಸಾವಿರಾರು ಮಾಲಾಧಾರಿಗಳ ದರ್ಶನಕ್ಕೆ ತೆರಳಿದ್ದಾರೆ. ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದ 33 ಭಕ್ತರು ಸಿಲುಕಿಕೊಂಡಿದ್ದಾರೆ. ಕೇರಳದ ಏರಿಮಲೈ ತಟ್ಟಿಪಿಟ್ಟಮ್ ಬಳಿ ಬಸ್ ಪಲ್ಟಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹಲವರು ಗಾಯಗೊಂಡಿದ್ದು ಶಬರಿಮಲೆಗೆ ಹೋಗಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ತಮ್ಮನ್ನ ಊರಿಗೆ ವಾಪಸ್‌ ಕರೆಸಿಕೊಳ್ಳಿ ಅಂತ ಅಂಗಲಾಚ್ತಿದ್ದಾರೆ.
ಕೇರಳದಲ್ಲಿ ‘ಅಮೀಬಾ’ ಅಬ್ಬರ, ಭಕ್ತರಲ್ಲಿ ಆತಂಕ!
ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ರೋಗದ ಹಾವಳಿಯೂ ಜೋರಾಗಿದೆ. ಮೆದುಳು ತಿನ್ನುವ ನೇಗ್ಲೇರಿಯಾ ಪೌಲೇರಿ ಎಂಬ ವೈರಸ್ ಭಯ ಹುಟ್ಟಿಸಿದೆ. ಇದು ಅಯ್ಯಪ್ಪನ ದರ್ಶನದ ಸಂಭ್ರಮದಲ್ಲಿರೋ ಭಕ್ತರಿಗೆ ಟೆನ್ಶನ್‌ ತಂದಿಟ್ಟಿದೆ. ಈ ವೈರಸ್ ಕರ್ನಾಟಕಕ್ಕೂ ಆತಂಕ ಹೆಚ್ಚಿಸಿದ್ದು, ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಶಬರಿಮಲೆ ಅಯ್ಯಪ್ಪ ಭಕ್ತರಿಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ರಿಲೀಸ್‌
ಅಮೀಬಾ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲ
ಇದನ್ನ ತಡೆಗಟ್ಟೋದು ಒಂದು ಸವಾಲು
ನಿಂತ ನೀರಿನಲ್ಲಿ ಸ್ನಾನ ಮಾಡೋದು ತಪ್ಪಿಸಿ
ಕುದಿಸಿದ ಮತ್ತು ತಂಪಾಗಿಸಿದ ನೀರು ಬಳಸಿ
ರೋಗಲಕ್ಷಣ ಕಂಡಬಂದಲ್ಲಿ ನಿರ್ಲಕ್ಷ್ಯ ಬೇಡ
ಕೂಡಲೇ ವೈದ್ಯರನ್ನ ಸಂಪರ್ಕಿಸಿದರೆ ಸೂಕ್ತ
ಅಮೀಬಾ ರೋಗಕ್ಕೆ ಸೂಕ್ತ ಚಿಕಿತ್ಸೆ ಇಲ್ಲ. ಇದನ್ನ ತಡೆಗಟ್ಟೋದು ಒಂದು ಸವಾಲಾಗಿದ್ದು, ನಿಂತ ನೀರಿನಲ್ಲಿ ಸ್ನಾನ ಮಾಡೋದನ್ನ ತಪ್ಪಿಸಿ. ಕುದಿಸಿದ ಮತ್ತು ತಂಪಾಗಿಸಿದ ನೀರು ಬಳಸಿ. ರೋಗಲಕ್ಷಣ ಕಂಡಬಂದಲ್ಲಿ ನಿರ್ಲಕ್ಷ್ಯ ಬೇಡ. ಕೂಡಲೇ ವೈದ್ಯರನ್ನ ಸಂಪರ್ಕಿಸಿದರೆ ಸೂಕ್ತ ಅಂತ ಭಕ್ತರಿಗಾಗಿ ಗೈಡ್‌ಲೈನ್ಸ್ ರಿಲೀಸ್‌ ಮಾಡಿದೆ.
ರಾಜ್ಯದ ನಾನಾ ಮೂಲೆಗಳಿಂದ ಶಬರಿಮಲೆಗೆ ಭಕ್ತರು ಪ್ರಯಾಣ ಬೆಳೆಸ್ತಿದ್ದಾರೆ. ಮಾರ್ಗಸೂಚಿ ಬೆನ್ನಲ್ಲೇ ಭಕ್ತರು ಅಲರ್ಟ್‌ ಆಗಿದ್ದು, ಗೈಡ್‌ಲೈನ್ಸ್‌ ಬಗ್ಗೆ ಅರಿವಿದೆ ಎಂದಿದ್ದಾರೆ. ಅಗತ್ಯ ಮುನ್ನೆಚ್ಚರಿಕ ಕ್ರಮಗಳನ್ನ ಕೈಗೊಂಡಿದ್ದೇವೆ. ಯಾವುದೇ ಆತಂಕವಿಲ್ಲ ಎಂದಿದ್ದಾರೆ.
ಒಟ್ಟಾರೆ ವೈರಸ್ ಹಾವಳಿ ಮಧ್ಯೆಯೇ ಲಕ್ಷಾಂತರ ಭಕ್ತರು ಅಯ್ಯಪ್ಪನ ದರ್ಶನಕ್ಕೆ ತೆರಳಿಸ್ತಿದ್ದಾರೆ. ಆರೋಗ್ಯ ಇಲಾಖೆ ಗೈಡ್‌ಲೈನ್ಸ್‌ ಪಾಲಿಸಿ ಎಚ್ಚರಿಕೆಯಿಂದ ಇರಬೇಕಿದೆ.

Share This Article