Ad image

70 ಕೋಟಿ ವಂಚನೆ ಕೇಸ್‌ – ಪೊಲೀಸರಿಂದ ಹಣ ರಿಕವರಿ ತಡೆಯಲು ವಿದೇಶಗಳಲ್ಲಿ ಹೂಡಿಕೆ

Team SanjeMugilu
1 Min Read

ಬೆಂಗಳೂರು: EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿ  ವಂಚನೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆ‌ ವೇಳೆ ಒಂದೊಂದೇ ಸ್ಫೋಟಕ ವಿಚಾರ ಹೊರಗೆ ಬರ್ತಿದ್ದು, ಆರೋಪಿಗಳು ಸಿನಿಮಾ ಸ್ಟೈಲ್‌ನಲ್ಲಿ ಪ್ಲ್ಯಾನ್‌ ಮಾಡಿದ್ರು. ಈ ಸಂಬಂಧ ಪ್ರಕರಣ ದಾಖಲಾದ್ರೂ ಅರೆಸ್ಟ್ ಆಗ್ಬಾರ್ದು, ಹಣ ಕೂಡ ರಿಕವರಿ ಆಗದಂತೆ ಮೊದಲೇ ಪ್ಲ್ಯಾನ್‌ ಮಾಡಿ ವಂಚನೆ ಮಾಡಲಾಗಿದೆ.

ಆರೋಪಿ‌ ಜಗದೀಶ್‌ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೊರ ದೇಶಗಳಲ್ಲಿ ಹೂಡಿಕೆ  ಮಾಡಿರೋದು ಗೊತ್ತಾಗಿದೆ. ದುಬೈನ ರೆಸ್ಟೋರೆಂಟ್‌ಗಳು, ರೇಸ್ ಕೋರ್ಸ್ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿದ್ದಾನೆ. ಹೊರದೇಶಗಳಲ್ಲಿ ಹೂಡಿಕೆ ಮಾಡಿದ್ರೆ ಅಧಿಕಾರಿಗಳಿಗೆ ರಿಕವರಿ ಮಾಡಲು ಆಗಲ್ಲ. ರಿಕವರಿಗೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಬರುತ್ವೆ ಅಂತಾ ಯೋಚನೆ ಮಾಡಿ ಹೂಡಿಕೆ ಮಾಡಿದ್ದಾನೆ ಆರೋಪಿ.

ಇನ್ನು ಜಗದೀಶ್ ಅಸಲಿಗೆ ಕಂಪನಿಯ ನೇರ ನೌಕರನಲ್ಲ. ಈತ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದು, ಈತನನ್ನ ಅರೆಸ್ಟ್ ಮಾಡಲು ಕೂಡ ಕೆಲ ತಾಂತ್ರಿಕ ಸಮಸ್ಯೆಯಿದೆ. ಬಡವರು, ಅಂಗವಿಕಲರು, ವೃದ್ಧೆಯರ ಹಣವೇ ಈತನ ಕೋಟಿ ಕೋಟಿ ಹಣ ಹೊಡೆಯುವ ಬಂಡವಾಳವಾಗಿದೆ. ಇವ್ರು ಹೂಡಿಕೆ ಮಾಡುವ ಹಣವನ್ನ ಮಲ್ಲೇಶ್ವರ ಡಿಸಿಸಿ ಬ್ಯಾಂಕ್‌ಗೆ ಡೆಪಾಸಿಟ್ ಮಾಡಿ ಅಲ್ಲಿಂದ ಚೆಕ್ ಮುಖಾಂತರ ಸಂಬಂಧಿಗಳ ಅಕೌಂಟ್‌ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಿದೇಶಗಳ ಅಕೌಂಟ್‌ಗಳಿಗೆ ಕಳಿಸಿರೋದು ಗೊತ್ತಾಗಿದೆ.

Share This Article