ಬೆಂಗಳೂರು: ಹೊಸ ವರ್ಷಕ್ಕೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ಸಿಲಿಕಾನ್ ಸಿಟಿಯಲ್ಲಿ ನೂತನ ವರ್ಷವನ್ನ ಬರಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಪಬ್, ಬಾರ್ ರೆಸ್ಟೋರೆಂಟ್ಗಳಲ್ಲಿ ಪಾರ್ಟಿಗೆ ತಯಾರಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದೆ. ಈ ಬಾರಿ ನಗರದ ಪೊಲೀಸ್ ಇಲಾಖೆ ಮುಂಚಿತವಾಗಿ ಕಠಿಣ ಗೈಡ್ ಲೈನ್ಸ್ ಹೊರಡಿಸಿದೆ. ಪಬ್, ಹೋಟೆಲ್ಗಳಿಗಷ್ಟೇ ಅಲ್ಲ ಪಿಜಿಗಳಿಗೂ ರೂಲ್ಸ್ ಅಪ್ಲೈ ಆಗಲಿದೆ.
ಪ್ರತಿನಿತ್ಯ ಮೀಟಿಂಗ್ ಮೇಲೆ ಮೀಟಿಂಗ್
ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಬೆಂಗಳೂರಿನ ಹಲವು ರಸ್ತೆಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ. ಎಲ್ಲೆಡೆ ಸೆಲೆಬ್ರೇಷನ್ಗೆ ಭರ್ಜರಿ ತಯಾರಿ ಕೂಡ ನಡೆದಿದೆ. ಬೆಂಗಳೂರು ಸಿಟಿ ಪೊಲೀಸರು ಮಾರ್ಗಸೂಚಿಗಳ ಕಾರ್ಯರೂಪಕ್ಕೆ ಪ್ರತಿನಿತ್ಯ ಮೀಟಿಂಗ್ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ.
ಪಿಜಿಗಳ ಮೇಲೂ ಖಾಕಿ ಹದ್ದಿನ ಕಣ್ಣು
ಎಂಜಿ ರೋಡ್ ಆಯ್ತು, ಪಬ್ ಬಾರ್ ರೆಸ್ಟೋರೆಂಟ್ ಆಯ್ತು ಈ ಬಾರಿ ಪಿಜಿಗಳ ಮೇಲೂ ಹದ್ದಿನ ಕಣ್ಣಿಡಲು ಪೊಲೀಸ್ ಇಲಾಖೆ ನಿರ್ಧಾರ ಮಾಡಿದೆ. ಇದೀಗ ನಗರದ ಎಲ್ಲಾ ಲೇಡೀಸ್, ಜೆಂಟ್ಸ್ ಪಿಜಿಗಳ ಸೆಲೆಬ್ರೇಷನ್ಗಳ ಬಗ್ಗೆ ನಿಗಾವಹಿಸಲು ಆಯಾ ಠಾಣಾ ಇನ್ಸ್ ಪೆಕ್ಟರ್ಗೆ ಜವಾಬ್ದಾರಿವಹಿಸಲಾಗಿದೆ.
ಪಿಜಿಗಳಿಗೂ ಮಾರ್ಗಸೂಚಿ
ಕೆಲ ಪಿಜಿಗಳಲ್ಲಿ ಅಸಭ್ಯ ವರ್ತನೆ ಸೇರಿದಂತೆ ಗಲಾಟೆ ಸಮಸ್ಯೆಗಳು ರಿಪೀಟ್ ಆದ ಹಿನ್ನೆಲೆ ಪಬ್ ಅಂಡ್ ರೆಸ್ಟೋರೆಂಟ್ ನಂತೆ ಪಿ.ಜಿ ಮಾಲೀಕರಿಗೂ ಮಾರ್ಗಸೂಚಿ ಹೊರಡಿಸಲು ಪೊಲೀಸರು ರೆಡಿಯಾಗಿದ್ದಾರೆ.
ಗೈಡ್ಲೈನ್ಸ್ ಪಾಲಿಸಲೇಬೇಕು
ಹೊಸವರ್ಷದ ಹಿಂದಿನ ದಿನ ಎಲ್ಲಾ ಪಿಜಿಗಳಲ್ಲಿ ಎಲ್ಲರ ಸಹಿ ಲೆಡ್ಜರ್ ಬುಕ್ ನಲ್ಲಿ ಕಡ್ಡಾಯವಾಗಲಿದೆ. ಸಿಸಿಟಿವಿಗಳು ಕಡ್ಡಾಯ ವರ್ಕ್ ಆಗ್ತಿರಬೇಕು. ಸಾಧ್ಯವಾದಷ್ಟು ಕ್ಯಾಮೆರಾ ರಸ್ತೆಗೆ ಹೆಚ್ಚುವರಿಯಾಗಿ ಬಳಕೆ ಮಾಡ್ಬೇಕು. ತಮ್ಮ ಪಿ.ಜಿ ಗಳಲ್ಲಿ ಟೇರಸ್ ಮೇಲೆ ಪಾರ್ಟಿ ಮಾಡಿ ಕುಡಿಯುವವರ ಬಗ್ಗೆ ಮಾಹಿತಿ ಸಂಗ್ರಹಿಸುವುದು ಹೀಗೆ ಕೆಲವು ರೂಲ್ಸ್ ಪಾಲಿಸಬೇಕಿದೆ.
ಅಪರಿಚಿತರಿಗೆ ಎಂಟ್ರಿ ಕೊಡುವಂತಿಲ್ಲ
ಹೊಸ ವರ್ಷದ ದಿನ ಹೊಸಬರು ಮತ್ತು ಅಪರಿಚಿತರನ್ನು ಪಿ.ಜಿ ಒಳಗೆ ಸೇರಿಸಿಕೊಳ್ಳಬಾರದು. ಪಿಜಿಗಳ ಮುಂಭಾಗದ ರಸ್ತೆಗಳಲ್ಲಿ ಹೊಸ ವರ್ಷದ ಪ್ರಯುಕ್ತ ಕೇಕ್ ಗಳನ್ನು ಕಟ್ ಮಾಡುವಂತಿಲ್ಲ. ಮಹಿಳಾ ಪಿಜಿಗಳಿಗೆ ಶುಭ ಕೋರಲು ಬರುವ ಪುರುಷರಿಗೆ ಅವಕಾಶ ನೀಡಬಾರದು.
ಪಿ.ಜಿ ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ಅದಕ್ಕೆ ಮಾಲೀಕರೆ ಹೊಣೆ ಎಂದು ಎಲ್ಲಾ ಪಿ.ಜಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಎಲ್ಲಾ ಏರಿಯಾ ಸೆಲಬ್ರೇಷನ್ ರೋಡ್ಗಳು ಈಗಲೇ ಮಾನಿಟರಿಂಗ್ ಮಾಡ್ಬೇಕು. ಸೆಲಬ್ರೇಷನ್ ಮಾಡೋರಿಗೆ ಈಗಲೇ ಪೊಲೀಸರ ಪರ್ಮಿಷನ್ ಕಡ್ಡಾಯವಾಗಲಿದೆ.
ಪಬ್, ರೆಸ್ಟೋರೆಂಟ್ಗಳ ಮೇಲಷ್ಟೇ ಅಲ್ಲ ಪಿಜಿಗಳ ಮೇಲೂ ಪೊಲೀಸರ ಹದ್ದಿನ ಕಣ್ಣು! ಪಾರ್ಟಿಗೆ ರೂಲ್ಸ್ ಅಪ್ಲೈ
