ದಾವಣಗೆರೆ: ಅಗಲಿದ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಅವರ ಪುತ್ರ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಭಾವುಕರಾದರು.
ದಾವಣಗೆರೆಯ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಕಳೆದ 15 ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಅನುಭವುಸುತ್ತಿದ್ದರು. ಇದು ವಯೋ ಸಹಜ ಕಾಯಿಲೆ ಹೀಗಾಗಿ ಅವರು ನಮ್ಮನ್ನಗಲಿದ್ದಾರೆ. ಬಹಳ ಕಷ್ಟದಿಂದ ಬೆಳೆದವರು ನನಗೆ ಆ ಕಷ್ಟ ಇಲ್ಲ. ತಮ್ಮ ತಂದೆ ಕಷ್ಟದಲ್ಲಿಯೇ ಹುಟ್ಟಿ, ಕಷ್ಟ ಅನುಭವಿಸಿಯೇ ಬೆಳೆದರು. ಅವರಲ್ಲಿ ಇರುವ ಸಾಮಾನ್ಯಜ್ಞಾನ ಮಾತ್ರ ಮೆಚ್ಚುವಂತಹದ್ದು. ಮೊದಲು ಉದ್ಯಮ ಹಾಗೂ ನಂತರ ರಾಜಕೀಯದಲ್ಲಿ ಬೆಳೆದರು. ನಮ್ಮ ತಾತ ಕೂಡಾ ಡಿ.16ಕ್ಕೆ ನಿಧನರಾಗಿದ್ದರು ತಂದೆ 14ಕ್ಕೆ ನಿಧನರಾಗಿದ್ದಾರೆ ಎಂದು ಭಾವುಕರಾದರು.
