ಮೈಸೂರು: ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ತುಂಬಿದ್ದ ಸಿಲಿಂಡರ್ ಸ್ಪೋಟಗೊಂಡಿತ್ತು . ಘಟನೆಯಲ್ಲಿ ಬಲೂನ್ ವ್ಯಾಪಾರಿ ಸಲೀಂ ಸೇರಿದಂತೆ ಗಾಯಗೊಂಡಿದ್ದ ಮತ್ತಿಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಸ್ಪೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಇದರ ನಡುವೆಯೇ ತಂಗಿ ಸಾವಿನ ದುಃಖದಲ್ಲೇ ಅಣ್ಣ ಕೂಡ ಸಾವನ್ನಪ್ಪಿರುವ ದುರಂತದ ಘಟನೆ ನಡೆದಿದೆ.
ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಮೈಸೂರು ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಪೋಟದಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲಕ್ಷ್ಮಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು. ಗಾಯಗೊಂಡಿದ್ದ ಬೆಂಗಳೂರು ಮೂಲದ ಲಕ್ಷ್ಮಿ ಅವ್ರು ಕೆ. ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಲಕ್ಷ್ಮಿ ಉಸಿರು ಚೆಲ್ಲಿದ್ದಾರೆ. ಮತ್ತೊಂದೆಡೆ ಗಾಯಗೊಂಡ ಮಂಜುಳಾ ಕೂಡ ಸಾವನ್ನಪ್ಪಿದ್ದಾರೆ.
ತಂಗಿ ಸಾವಿನ ಸುದ್ದಿ ಕೇಳಿ ಅಣ್ಣ ಸಾವು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳಾ ನಿನ್ನೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ರು. ತಂಗಿ ಮಂಜುಳಾ ಸಾವಿನ ಸುದ್ದಿ ಕೇಳಿ ಅಣ್ಣ ಪರಮೇಶ್ವರ್ ಸಾವನ್ನಪ್ಪಿರುವ ದುರ್ಘಟನೆ ಕೂಡ ನಡೆದಿದೆ. ಇಬ್ಬರೂ ನಂಜನಗೂಡಿನ ಚಾಮಲಾಪುರದ ನಿವಾಸಿಗಳಾಗಿದ್ದಾರೆ.
ಸ್ಪೋಟದ ದುರಂತದಲ್ಲಿ ಸಿಲುಕಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮಂಜಳಾ ಸಾವನ್ನಪ್ಪಿದ್ದಾರೆ. ತಂಗಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಅಣ್ಣ ಪರಮೇಶ್ವರ್ (60) ಕೂಡ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತ ಮಂಜುಳ ಅಣ್ಣ ಪರಮೇಶ್ವರ್ ತಂಗಿಯ ಅಂತ್ಯ ಸಂಸ್ಕಾರ ಆಗ್ತಿದ್ದಂತೆ ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಸ್ಪೋಟ ಆಕಸ್ಮಿಕನಾ ಅಥವಾ ಉದ್ದೇಶ ಪೂರ್ವಕನಾ?
ಅರಮನೆ ಬಳಿ ಹಿಲೀಯಂ ಗ್ಯಾಸ್ ಸಿಲಿಂಡರ್ ಸ್ಪೋಟ ಪ್ರಕರಣದ ಬಗ್ಗೆ ಪೊಲೀಸರು ಮತ್ತೊಂದು ಆಯಾಮದಲ್ಲಿ ತನಿಖೆ ಶುರು ಮಾಡಿದ್ದಾರೆ. ಎಷ್ಟು ದಿನದಿಂದ ಸಲೀಂ ಬಲೂನ್ ಮಾರಾಟ ಮಾಡ್ತಿದ್ದ? ಅರಮನೆ ಮುಂಭಾಗಕ್ಕೆ ಸಲೀಂ ಬಂದ ಕೆಲ ಕ್ಷಣಗಳಲ್ಲೇ ಗ್ಯಾಸ್ ಸ್ಪೋಟಗೊಂಡಿದ್ದು ಹೇಗೆ? ಸ್ಪೋಟ ಆಕಸ್ಮಿಕನಾ ಅಥವಾ ಉದ್ದೇಶ ಪೂರ್ವಕನಾ? ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
15 ದಿನಗಳಿಂದ ಲಾಡ್ಜ್ನಲ್ಲಿದ್ದ ಸಲೀಂ
ಹೊಸ ವರ್ಷ ಸಮೀಪವಿರುವಾಗ್ಲೇ ಸ್ಪೋಟ ಸಂಭವಿಸಿದ್ದು, ಆತಂಕಕ್ಕೂ ಕಾರಣವಾಗಿದೆ. ಉತ್ತರ ಪ್ರದೇಶದಿಂದ ಮೈಸೂರಿಗೆ ಬಂದಿದ್ದ ಸಲೀಂ, ಕಳೆದ 15 ದಿನಗಳಿಂದ ಮೈಸೂರಿನ ಲಷ್ಕರ್ ಮೊಹಲ್ಲಾದ ಖಾಸಗಿ ಲಾಡ್ಜ್ ನಲ್ಲಿ ವಾಸವಿದ್ದ ಎನ್ನಲಾಗ್ತಿದೆ.
ಪ್ರವಾಸಿ ತಾಣಗಳ ಬಳಿ ಸುತ್ತಾಡ್ತಿದ್ದ ಸಲೀಂ
ಬಲೂನ್ ಮಾರಾಟ ಮಾಡ್ತಿದ್ದ ಸಲೀಂ ನಿತ್ಯ, ಮೈಸೂರು ಅರಮನೆ , ದೇವರಾಜ ಅರಸು ರಸ್ತೆ, ಕೆ.ಆರ್. ಸರ್ಕಲ್, ಜಗನ್ಮೋಹನ ಅರಮನೆ, ಮೃಗಾಲಯದ ಬಳಿ ಅಡ್ಡಾಡುತ್ತಿದ್ದ ಎಂದು ತಿಳಿದು ಬಂದಿದೆ. ಸರ್ವಿಸ್ ಲಾಡ್ಜ್ ನಲ್ಲಿ ವಾಸವಿದ್ದ ಸಲೀಂ, ಬೆಳಗ್ಗೆ ಲಾಡ್ಜ್ ಬಿಟ್ಟರೆ ತಡರಾತ್ರಿ ಲಾಡ್ಜ್ ಸೇರುತ್ತಿದ್ದನಂತೆ.
ಅರಮನೆ ಬಳಿ ಸ್ಪೋಟ ಪ್ರಕರಣ, ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಇತ್ತ ತಂಗಿ ಸಾವಿನ ಸುದ್ದಿ ಕೇಳಿ ಅಣ್ಣ ಸಾವು
