Ad image

ಪಿಜಿ ವೈದ್ಯಕೀಯ ಆಪ್ಷನ್ಸ್ ದಾಖಲಿಸಲು ಫೆ.10ರವರೆಗೆ ದಿನಾಂಕ ವಿಸ್ತರಣೆ: ಕೆಇಎ

Team SanjeMugilu
1 Min Read

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ 3ನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಫೆ.10ರಂದು ಬೆಳಗ್ಗೆ 8 ಗಂಟೆವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

ತಾತ್ಕಾಲಿಕ ಸೀಟು ಹಂಚಿಕೆಯನ್ನು ಫೆ.10ರಂದು ಸಂಜೆ 5 ಗಂಟೆ ಹಾಗೂ ಅಂತಿಮ ಸೀಟು ಹಂಚಿಕೆ ಫಲಿತಾಂಶವನ್ನು ಫೆ.11ರಂದು ಮಧ್ಯಾಹ್ನ 1 ಗಂಟೆ ನಂತರ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾರಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು ಹೇಗೆ? – ವಿಮಾನ ಪತನದ ಬಗ್ಗೆ ಮೂಡಿವೆ ಅನುಮಾನ

ಸೀಟು ಹಂಚಿಕೆಯಾದವರು ಫೆ.12ರಿಂದ 13ರವರೆಗೆ ಶುಲ್ಕ ಪಾವತಿಸಿ, ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ಫೆ.14ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳಿಗೆ ಮೇಲಿಂದ ಮೇಲೆ ಕೆಇಎ ವೆಬ್‌ಸೈಟ್ ನೋಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Share This Article