ಬೆಂಗಳೂರು: ತಣ್ಣಗಾಗಿದ್ದ ನಾಯಕತ್ವ ಬದಲಾವಣೆ ಹಾಗೂ ಪವರ್ ಶೇರಿಂಗ್ ಚರ್ಚೆ ಮತ್ತೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆಗೆ ಗೈರಾಗ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದಾರೆ. ಈ ವೇಳೆ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಏನೋ ಮಾತುಕತೆ ನಡೆದಿದೆ ಎಂದು ಡಿಕೆಶಿ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡ್ತಿದ್ದಂತೆ ಸಿಎಂ ಗರಂ ಆಗಿದ್ದಾರೆ.
ಅನುಮತಿ ಪಡೆದು ದೆಹಲಿಗೆ ಹೋದ್ರಾ ಡಿಕೆಶಿ?
ಬಜೆಟ್ ಪೂರ್ವ ಸಿದ್ದತೆಗೆ ಡಿಕೆ ಶಿವಕುಮಾರ್ ಗೈರಾಗಿದ್ದು, ಅನುಮತಿ ಪಡೆದಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅವರು, ಹೌದು ಲೆಟರ್ ಬರೆದಿದ್ದಾರೆ, ಅಸ್ಸಾಂ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗ್ತಿನಿ ಅಂತ ತಿಳಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲೂ ಸಭೆ ನಡೆಯುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಡಿಕೆಶಿ ಮಾತಿಗೆ ಸಿಎಂ ರಿಯಾಕ್ಷನ್ ಏನು?
ನಾನು ಹಾಗೂ ಸಿದ್ದರಾಮಯ್ಯ ಕದ್ದು ಮುಚ್ಚಿ ಮಾತಾಡಿಲ್ಲ ಹೈಕಮಾಂಡ್ ಮುಂದೆಯೇ ಎಲ್ಲಾ ಮಾತುಕತೆ ನಡೆದಿದೆ ಎಂಬ ಡಿಕೆಶಿ ಮಾತಿನ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಸಿಎಂ ಗರಂ ಆಗಿದ್ದಾರೆ. ನಾನು ಅದರ ಬಗ್ಗೆ ಮಾತಾಡೋದಿಲ್ಲ. ಹೈಕಮಾಂಡ್ ಏನ್ ಹೇಳುತ್ತೆ ಅದರಂತೆ ನಡೆದುಕೊಳ್ಳುವೆ. ಅವರು ಏನ್ ಹೇಳಿದ್ದಾರೆ ಆ ಬಗ್ಗೆ ಅವರನ್ನೇ ಕೇಳಿ ಎಂದು ಗರಂ ಆಗಿ ನುಡಿದಿದ್ದಾರೆ
ನೀವು ಕೂಡ ದೆಹಲಿಗೆ ಹೋಗ್ತಿರಾ!?
ಹೈಕಮಾಂಡ್ ನಾಯಕರ ಭೇಟಿಗೆ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದಾರೆ. ನೀವು ಕೂಡ ದೆಹಲಿಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಕರೆಯದೆ ನಾನು ಯಾಕೆ ಹೋಗಲಿ. ಬಜೆಟ್ ಸಭೆಗಳು ಇವೆ. ಹೈಕಮಾಂಡ್ ಕರೆದ್ರೆ ಹೋಗ್ತಿನಿ ಎಂದಿದ್ದಾರೆ.
ಕೆಂಗಲ್ ಹನುಮಂತಯ್ಯಗೆ ಮಾಲಾರ್ಪಣೆ
ಕೆಂಗಲ್ ಹನುಮಂತಯ್ಯ ಅವರ ಜನ್ಮ ದಿನ ಇದೆ. ಇಡೀ ರಾಜ್ಯದ ಪರವಾಗಿ ಸರ್ಕಾರ ಮಾಲಾರ್ಪಣೆ ಮಾಡಿ, ಗೌರವ ಸೂಚಿಸಿದೆ ಎಂದ ಸಿದ್ದರಾಮಯ್ಯ ಅವ್ರು, ಕೆಂಗಲ್ ಹನುಮಂತಯ್ಯ ಕೊಡುಗೆಯನ್ನ ನೆನೆದರು. ಅವರು ಪ್ರಾಮಾಣಿಕ, ದಿಮಂತ ರಾಜಕಾರಣಿ ಆಧುನಿಕ ಕರ್ನಾಟಕ ಕಟ್ಟೋದರಲ್ಲಿ ಬಹಳ ಶ್ರಮ ವಹಿಸಿದರು. ಅವರ ಕಾಲದಲ್ಲಿ ಈ ವಿಧಾನಸೌಧ ಆಗಿದೆ. ಇಡೀ ದೇಶದಲ್ಲಿ ಇದೇ ವಿಧಾನಸೌಧ ಸುಂದರ ಆಗಿದೆ ಎಂದ್ರು.
ಪ್ಲಾನ್ ಮಾಡಿ ವಿಧಾನಸೌಧ ಕಟ್ಟಿದ್ದಾರೆ. ಅವರಿಗೆ ಎಲ್ಲಾ ಕ್ರಿಡಿಟ್ ಹೋಗಬೇಕು ಜೊತೆಗೆ ಏಕೀಕರಣ ಹೋರಾಟ ಮಾಡಿದ್ರು, ಅವರ ಪಾತ್ರ ಕೂಡ ಇದೆ. ಕೇಂದ್ರದಲ್ಲೂ ರೈಲ್ವೇ ಮಂತ್ರಿ ಆಗಿದ್ರು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ರು. ಅನೇಕ ಸಲಹೆ ಗಳನ್ನು ಸಂವಿಧಾನ ರಚನಾ ಸಮಿತಿಗೆ ಕೊಟ್ಟಿದ್ದರು. ಅಂತಹ ನಾಯಕ ಮೊದಲನೇ ಎಲೆಕ್ಟೆಡ್ ಸಿಎಂ ಆಗಿದ್ದರು. ಸಿಎಂ ಆಗಿ ಅವರು ವಿಧಾನಸೌಧ ಉದ್ಘಾಟನೆ ಮಾಡಿಲಿಲ್ಲ. ಅವರ ಆದರ್ಶ ಸಿದ್ದಾಂತ ನಮಗೆ ಮಾರ್ಗದರ್ಶನ ಎಂದು ಸಿದ್ದರಾಮಯ್ಯ ಹೇಳಿದ್ರು.
ಕದ್ದು-ಮುಚ್ಚಿ ಮಾತಾಡಿಲ್ಲ ಅಂತಿದ್ದಾರೆ ಡಿಕೆಶಿ; ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
