Ad image

ಬೆಂಗಳೂರು ಮಂದಿಗೆ ಮತ್ತೊಂದು ಶಾಕ್‌! GBA ಜಾರಿ ಮಾಡ್ತಿದೆ ಮತ್ತೊಂದು ನಿಯಮ

Team SanjeMugilu
3 Min Read

ಬೆಂಗಳೂರು: ರಾಜಧಾನಿ ಬೆಂಗಳೂರು ಮಂದಿಗೆ ಬರೆ ಮೇಲೆ ಬರೆ ಬೀಳ್ತಿದೆ. ನೀರು, ಕರೆಂಟ್ ಬಿಲ್ ಏರಿಕೆ  ಜೊತೆಗೆ ಕಸದ ಮೇಲೆ ಸೆಸ್ ಕೂಡ ಹಾಕಲಾಗಿತ್ತು. ಇದೀಗ ಜಿಬಿಎ ಪಾರ್ಕಿಂಗ್ ಫೀಸ್‌ ನೀತಿ ಜಾರಿ ಮಾಡಲು ಮುಂದಾಗಿದೆ. ಮನೆ ಗೇಟ್ ಒಳಗಡೆ ಬಿಟ್ಟು, ರಸ್ತೆ ಅಥವಾ ಬೇರೆಲ್ಲೇ ವಾಹನ ನಿಲ್ಲಿಸಿದರೂ ಫೀಸ್‌ ಕಟ್ಬೇಕಿದೆ.
ಪಾರ್ಕಿಂಗ್‌ ದರ ನೀತಿ ಜಾರಿಗೆ GBA ಸಿದ್ಧತೆ..!
ಸಿಲಿಕಾನ್‌ ಸಿಟಿಯಲ್ಲಿ ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ಜಿಬಿಎ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸಲು ಕೆಲವು ಕಡೆ ಬಹುಮಹಡಿ ಪಾರ್ಕಿಂಗ್‌ ಕಟ್ಟಡಗಳನ್ನೂ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೇ ಕೆಲ ರಸ್ತೆಗಳಲ್ಲಿ ಪೇ ಆ್ಯಂಡ್‌ ಪಾರ್ಕ್‌ ವ್ಯವಸ್ಥೆ ಕೂಡಾ ಜಾರಿಯಲ್ಲಿದೆ. ಆದರೂ ಕೂಡ ಜನರು ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್‌ ಮಾಡಿ ಸಂಚಾರಕ್ಕೆ ಅಡ್ಡಿ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಪಾರ್ಕಿಂಗ್ ಫೀಸ್‌ ಜಾರಿಗೆ ತರಲು ಜಿಬಿಎ ಪ್ಲ್ಯಾನ್‌ ಮಾಡಿದೆ.
ಮನೆಯ ಎದುರು ಜನರು ಪಾರ್ಕಿಂಗ್ ಮಾಡಿಟ್ಟಿದ್ದಾರೆ. ರೋಡ್ ನಲ್ಲಿಯೂ ಜನರು ಪಾರ್ಕಿಂಗ್ ಮಾಡುತ್ತಿದ್ದಾರೆ. ಜನರು ತೆರಿಗೆ ಕೊಡುತ್ತಿಲ್ಲ, ಯಾವುದೇ ಬಾಡಿಗೆ ಕೊಡುತ್ತಿಲ್ಲ. ಆದರೆ ಆ ಆಸ್ತಿ ಪಾಲಿಕೆಯದ್ದು, ಆದ್ದರಿಂದ ಎಲ್ಲೆಲ್ಲಿ ಟ್ರಾಫಿಕ್ ಜಾಸ್ತಿ ಇದೆ. ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಇದರಿಂದ ಜನರಿಗೆ ಸಮಸ್ಯೆ ಆಗುತ್ತಿದೆ. ಅಪಘಾತ, ಟ್ರಾಫಿಕ್ ಆಗುವ ಸಾಧ್ಯತೆ ಇದೆ. ಆದ್ದರಿಂದ ನಾವು ಇಂತಹ ಪ್ರದೇಶಗಳಲ್ಲಿ ವಾಹನ ನಿಲ್ಲಸಬಹುದಾ? ಅಥವಾ ಇದಕ್ಕೆ ಎಷ್ಟು ಶುಲ್ಕ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಜಿಬಿಎ ಚೀಫ್ ಕಮಿಷನರ್ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಏನಿದು GBA ಪಾರ್ಕಿಂಗ್ ನೀತಿ..?
ಮನೆ ಗೇಟ್ ಹೊರಗೆ ವಾಹನ ನಿಲ್ಲಿಸಿದ್ರೆ ಫೀಸ್‌ ಪಾವತಿ
ಒಂದು ಕಾರಿಗೆ ಮಾಸಿಕ ದರ ನಿಗದಿ ಮಾಡಲಿರುವ ಜಿಬಿಎ
GBA ವತಿಯಿಂದ ಪಿಪಿಪಿ ಮಾಡೆಲ್‌ನಲ್ಲಿ ಹೊಸ ನೀತಿ ಜಾರಿ
ಪ್ರತಿ ಕಾರಿಗೆ 3 ಸಾವಿರ ತನಕ ದರ ನಿಗದಿಗೆ ಪ್ರಾಧಿಕಾರ ಚಿಂತನೆ
ಇದಕ್ಕಾಗಿ ನೂತನ ಪಾರ್ಕಿಂಗ್ ವ್ಯವಸ್ಥೆ ಮಾಡಲಿರುವ GBA
ಇಡೀ ಬೆಂಗಳೂರಲ್ಲಿ ವಾಹನ ಪಾರ್ಕಿಂಗ್‌ಗೆ ಜಾಗದ ವ್ಯವಸ್ಥೆ
ಅಥಾರಿಟಿ ನಿಗದಿ ಮಾಡಿರುವ ಜಾಗದಲ್ಲಿ ಪಾರ್ಕಿಂಗ್‌ ಸೌಲಭ್ಯ
ಸ್ವಲ್ಪ ಟ್ರಾಫಿಕ್ ಸಮಸ್ಯೆ ಪರಿಹಾರದ ಜೊತೆಗೆ GBAಗೆ ಆದಾಯ
ಹೊಸ ಕಟ್ಟಡ ನಿರ್ಮಾಣದ ವೇಳೆ ಪಾರ್ಕಿಂಗ್‌ಗೆ ಜಾಗ ಅನಿವಾರ್ಯ
ಏನಿದು ಜಿಬಿಎ ಪಾರ್ಕಿಂಗ್ ಫೀ ನಿಯಮ ಅಂತ ನೋಡೋದಾದ್ರೆ, ಮನೆಯ ಗೇಟ್ ಒಳಗಡೆ ಹೊರತುಪಡಿಸಿ ಎಲ್ಲೆ ವಾಹನ ನಿಲ್ಲಿಸಿದ್ರೂ ಜಿಬಿಎಗೆ ದರ ಪಾವತಿ ಮಾಡಬೇಕು. ಒಂದು ಕಾರಿಗೆ 3 ಸಾವಿರದವರೆಗೆ ದರ ನಿಗದಿ ಮಾಡಲು ಪ್ರಾಧಿಕಾರ ಚಿಂತನೆ ಮಾಡಿದೆ. ಇದಕ್ಕಂತಲೇ ನೂತನ ಪಾರ್ಕಿಂಗ್ ಜಾಗದ ವ್ಯವಸ್ಥೆ ಮಾಡಲಿರುವ ಅಥಾರಿಟಿ. ಇಡೀ ಬೆಂಗಳೂರಲ್ಲಿ ವಾಹನ ಪಾರ್ಕ್ ಮಾಡಲು ಜಾಗದ ವ್ಯವಸ್ಥೆ ಮಾಡಲಿದೆ. ಅಥಾರಿಟಿ ನಿಗದಿ ಮಾಡಿರುವ ಜಾಗದಲ್ಲಿ ಪಾರ್ಕ್ ಮಾಡಿ ತಿಂಗಳಿಗೆ 3 ಸಾವಿರ ಸಂಗ್ರಹ ಮಾಡಲು ನಿರ್ಧರಿಸಿದ್ದು, ಇದರಿಂದ ಟ್ರಾಫಿಕ್ ಸಮಸ್ಯೆಗೆ ಕೊಂಚ ಪರಿಹಾರ ಸಿಗುವ ಜೊತೆಗೆ ಜಿಬಿಎಗೆ ಆದಾಯ ಹರಿದು ಬರಲಿದೆ. ಹೊಸ ಕಟ್ಟಡದ ನಿರ್ಮಾಣದ ವೇಳೆ ಪಾರ್ಕಿಂಗ್‌ಗೆ ಜಾಗ ಬಿಡುವುದು ಅನಿವಾರ್ಯವಾಗಿದೆ.
ಹೊಸ ನೀತಿ ಪ್ರಕಾರ ಮನೆ ಕಾಂಪೌಂಡ್‌ ಹೊರತಾಗಿ ರಸ್ತೆ ಅಥವಾ ಹೊರಗಡೆ ಎಲ್ಲೆ ವಾಹನ ನಿಲ್ಲಿಸಿದ್ರೂ ಹಣ ಕಟ್ಟಬೇಕಾಗುತ್ತೆ. ಪಾಲಿಕೆಯ ಈ ನಿರ್ಧಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬಹುತೇಕ ಮನೆಗಳಲ್ಲಿ ಪಾರ್ಕಿಂಗ್‌ ಸಮಸ್ಯೆಯಿದೆ. ಹೀಗಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡುವುದು ಒಳ್ಳೆಯದು. ಆದರೆ ತಿಂಗಳಿಗೆ ನಿಗದಿ ಮಾಡಲಾಗಿರುವ ದರವನ್ನ ಅತ್ಯಂತ ಕಡಿಮೆಗೆ ಸೀಮಿತಿಗೊಳಿಸಿದರೆ ಅನುಕೂಲ ಎನ್ನುವುದು ಸಾರ್ವಜನಿಕರು ಅಭಿಪ್ರಾಯ.
ಕಳೆದ ವರ್ಷ ಕಸದ ಸೆಸ್‌ಗೆ ಕೈ ಹಾಕಿದ ಜಿಬಿಎ ಭಾರಿ ವಿರೋಧದ ನಡುವೆವೂ ಕಸದ ಸೆಸ್‌ ಕಲೆಕ್ಷನ್‌ ಮಾಡುತ್ತಿದೆ. ಇದೀಗ ಇದೇ ಮಾದರಿಯಲ್ಲಿ ಜಿಬಿಎ ಬೈಲಾ ಪ್ರಕಾರ ಪಾರ್ಕಿಂಗ್ ಶುಲ್ಕ ನೀತಿಯನ್ನೂ ಜಾರಿಗೆ ತರಲು ಕರಡು ಸಿದ್ಧಪಡಿಸಿದೆ. ಈಗಲೂ ಜಿಬಿಎ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Share This Article