ಬೆಂಗಳೂರು: ಒಂದು ಕಡೆ ಮತದಾರರ ಪಟ್ಟಿ ಲೋಪದೋಷ ಪರಿಷ್ಕರಣೆಗೆ ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ. ಮತ್ತೊಂದು ಕಡೆ ಜಿಬಿಎ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ದಾಖಲೆ ಅರ್ಜಿ ಸಲ್ಲಿಕೆ ಆಗಿದೆ. ಅರ್ಜಿ ಸಲ್ಲಿಕೆಗೆ ಇದ್ದ ಸಮಯ ಕೂಡ ಮುಕ್ತಾಯ ಆಗಿದೆ.
ಜೂನ್ 30ರ ಒಳಗಡೆ ಜಿಬಿಎ ಚುನಾವಣೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಸಹಜವಾಗಿ ಈಗ ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ. ಈಗಾಗಲೇ ಎಲ್ಲಾ ಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್‌ನಲ್ಲಂತೂ ಜಿಬಿಎ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದ್ದು ನೂರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
369 ವಾರ್ಡ್‌ಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಏರಿಕೆ ಆಗುತ್ತಿದೆ. 1,600 ಮಂದಿ ಅರ್ಜಿಯನ್ನ ಸ್ವೀಕಾರ ಮಾಡಿದ್ದಾರೆ. 1,600 ಮಂದಿಯಲ್ಲಿ 369 ವಾರ್ಡ್‌ಗೆ 900 ಆಕಾಂಕ್ಷಿಗಳು ಚುನಾವಣೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಟಿಕೆಟ್ ಹಂಚಿಕೆ ವೇಳೆ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ. ಇನ್ನೂ ಅರ್ಜಿ ಸಲ್ಲಿಕೆ ಒಂದು ಕಡೆ ರಾಜ್ಯ ಕಾಂಗ್ರೆಸ್ ಮತದಾರರ ಪಟ್ಟಿಯಲ್ಲಿ ಇರುವ ಲೋಪದೋಷಗಳನ್ನ ಸರಿಪಡಿಸಿ ಅಂತಾ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ. ಖುದ್ದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಚುನಾವಣಾ ಆಯೋಗಕ್ಕೆ ಭೇಟಿ ಕೊಟ್ಟು ಲೋಪದೋಷ ಸರಿಪಡಿಸಿ ಅಂದಿದ್ದಾರೆ. ಪ್ರಮುಖವಾಗಿ ಒಂದೇ ಕುಟುಂಬದವರು ಬೇರೆ ಬೇರೆ ವಾರ್ಡ್‌ಗಳಲ್ಲಿ ಮತದಾನ ಮಾಡುವ ರೀತಿ ಮತದಾರರ ಪಟ್ಟಿ ಇದೆ, ಇದು ಮತಗಳು ವಿಭಜನೆ ಆಗುತ್ತದೆ. ಒಂದೇ ಕುಟುಂಬದ ಮತದಾನ ಚದುರುವಿಕೆ ಮಾಡಿದ ಬಿಎಲ್‌ಓಗಳನ್ನ ಅಮಾನತು ಮಾಡೋದಕ್ಕೂ ಮನವಿ ಮಾಡಿದೆ. ಈ ರೀತಿ ಲೋಪದೋಷಗಳು ಇದ್ದರೆ ಸರಿಪಡಿಸುವುದಕ್ಕೆ ಮನವಿ ಮಾಡಿದ್ದಾರೆ.
