Ad image

ಇನ್‌ಸ್ಟಾಗ್ರಾಮ್‌ನಲ್ಲಿ 10,00,00,000 ಫಾಲೋವರ್ಸ್‌ ದಾಟಿದ ಮೊದಲ ವಿಶ್ವನಾಯಕ ಮೋದಿ

Team SanjeMugilu
1 Min Read

ನವದೆಹಲಿ: ಇಸ್ರೇಲ್‌ಗೆ 2 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ  ಅವರು ಡಿಜಿಟಲ್‌ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ  100 ಮಿಲಿಯನ್‌ (10 ಕೋಟಿ) ಫಾಲೋವರ್ಸ್‌ ಹೊಂದುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಈ ಮೂಲಕ ದೇಶವನ್ನು ಮುನ್ನಡೆಸುವ ಜಗತ್ತಿನ ನಾಯಕರ ಪಟ್ಟಿಯಲ್ಲಿ ಮೊದಲ ವಿಶ್ವನಾಯಕ ಹಾಗೂ ರಾಜಕಾರಣಿ ಎಂಬ ಹೆಗ್ಗಳಿಕೆಗೂ ಮೋದಿ ಪಾತ್ರವಾಗಿದ್ದಾರೆ.

2014ರಲ್ಲಿ ಮೊದಲ ಬಾರಿ ಪ್ರಧಾನಿ ಹುದ್ದೆಗೇರಿದ ಬಳಿಕ ಇನ್‌ಸ್ಟಾಗ್ರಾಮ್‌ ಪ್ರವೇಶಿಸಿದ ಮೋದಿ ಅವರು ಕಳೆದ ದಶಕಗಳಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದಾರೆ. ಜಾಗತಿಕ ನಾಯಕರ ಪಟ್ಟಿಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇಂಡೋನೇಷ್ಯಾ, ಬ್ರೆಜಿಲ್‌ ಅಧ್ಯಕ್ಷಋು ಹಾಗೂ ಭಾರತದ ಯೋಗಿ ಆದಿತ್ಯನಾಥ್‌ ಮತ್ತು ರಾಹುಲ್‌ ಗಾಂಧಿ  ಅವರಿಗೆ ಹೋಲಿಸಿದ್ರೆ ಮೋದಿ ಫಾಲೋರ್ವಸ್‌ಗಳ ಸಂಖ್ಯೆ ಹಲವು ಪಟ್ಟು ಹೆಚ್ಚಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 43.2 ಮಿಲಿಯನ್ (4.32 ಕೋಟಿ), ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ 1.5 ಕೋಟಿ, ಬ್ರೆಜಿಲ್‌ ಅಧ್ಯಕ್ಷ ಲೂಯಿಜ್‌ ಇನಾಸಿಯೋ ಲುಲಾ ಡ ಸಿಲ್ವಾ 1.44 ಕೋಟಿ, ಟರ್ಕಿ ಅಧ್ಯಕ್ಷ ರೆಸೆಪ್‌ ತಯ್ಯಿಪ್‌ ಎರ್ಡೋಗನ್‌ 1.16 ಕೋಟಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್‌ 64 ಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದು, ವಿಶ್ವನಾಯಕರ ಪಟ್ಟಿಯಲ್ಲಿ ಭಾರತದ ಪ್ರಧಾನಿಗಳಿಂತಲೂ ಹಿಂದಿದ್ದಾರೆ.

ಇನ್ನೂ ಭಾರತದ ರಾಜಕೀಯ ನಾಯಕರ ಪಟ್ಟಿಯಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ 1.61 ಕೋಟಿ ಇದ್ದರೆ, ರಾಹುಲ್‌ ಗಾಂಧಿ 1.26 ಕೋಟಿ ಫಾಲೋವರ್ಸ್‌ಗಳನ್ನ ಹೊಂದುವ ಮೂಲಕ 3ನೇ ಸ್ಥಾನದಲ್ಲಿದ್ದಾರೆ.  2024 ರಲ್ಲಿ ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ (ಟ್ವಿಟ್ಟರ್‌) 100 ಮಿಲಿಯನ್‌ (10 ಕೋಟಿ) ಫಾಲೋವರ್ಸ್‌ ಹೊಂದಿದ್ದ ವಿಶೇಷ ಸಾಧನೆ ಮಾಡಿದ್ದರು.

Share This Article