ಬೆಂಗಳೂರು: ತನ್ನ ಆದಾಯ ಹೆಚ್ಚಿಸಿಕೊಳ್ಳೋಕೆ ಜನರ ಮೇಲೆ ಬರೆ ಎಳೆಯಲು ಬಿಡಿಎ ಮುಂದಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿರೋ ಬಡಾವಣೆ ಮೇಲೆ ಸುಧಾರಣ ಶುಲ್ಕ ವಿಧಿಸಲು ಬಿಡಿಎ ಮುಂದಾಗಿದೆ.
ಬಿಡಿಎ ಅಭಿವೃದ್ಧಿ ಪಡಿಸಿರೋ ಲೇಔಟ್‌ಗಳಲ್ಲಿ ಸೈಟು ಕೊಂಡುಕೊಂಡವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶಾಕ್ ಕೊಟ್ಟಿದೆ. ಇನ್ಮುಂದೆ ಬಿಡಿಎ ಲೇಔಟ್ ನಿವಾಸಿಗಳು ತಾವು ಖರೀದಿಸಿರುವ ಸೈಟಿನ ಪ್ರತಿ ಚದರ ಅಡಿಗೂ ಇಂತಿಷ್ಟು ಸುಧಾರಣ ಶುಲ್ಕ ಪಾವತಿಸಬೇಕಿದೆ. ಈ ಬಗ್ಗೆ ಬಿಡಿಎ ನಿರ್ಧಾರ ಮಾಡಿದ್ದು ಶೀಘ್ರವೇ ಜಾರಿಯಾಗಲಿದೆ ಈ ಹೊಸ ನಿಯಮ.
ಲೇಔಟ್‌ಗಳಲ್ಲಿ ಸುಧಾರಣಾ ಶುಲ್ಕ ವಸೂಲಿಗೆ ಪ್ಲ್ಯಾನ್
ಸದ್ಯ ಬಿಡಿಎ ನಗರದಲ್ಲಿ ಪೂರ್ಣ ಪ್ರಮಾಣದಲ್ಲಿ 22 ಬಡಾವಣೆಗಳನ್ನು ನಿರ್ಮಿಸಿದೆ. ಇವೆಲ್ಲವೂ ಬಹುತೇಕ ಮಾರಾಟವಾಗಿದೆ. ಇಲ್ಲಿನ ಆಸ್ತಿ ಮಾಲೀಕರಿಗೆ ಪ್ರತಿ ಚದರ ಅಡಿಗೆ 15 ರೂಪಾಯಿಯಿಂದ 336 ರೂಪಾಯಿವರೆಗೆ ಸುಧಾರಣಾ ಶುಲ್ಕ ವಿಧಿಸಲು ಬಿಡಿಎ ಮುಂದಾಗಿದೆ.
ಯಾವ್ಯಾವ ಲೇಔಟ್ಗೆ ಎಷ್ಟು ಶುಲ್ಕ?
ಲೇಔಟ್ ಶುಲ್ಕ (ಪ್ರತಿ ಚದರಡಿಗೆ)
ಅರ್ಕಾವತಿ 336 ರೂ.
ಬನಶಂಕರಿ ಆರನೇ ಹಂತ 99 ರೂ.
ಬನಶಂಕರಿ ಆರನೇ ಹಂತ 99 ರೂ.
ನಾಡಪ್ರಭು ಕೆಂಪೇಗೌಡ 74 ರೂ.
ಜ್ಞಾನಭಾರತಿ ಲೇಔಟ್ 73 ರೂ.
ಜೆಪಿ ನಗರ 9ನೇ ಹಂತ 48 ರೂ.
ಅಂಜನಪುರ ಲೇಔಟ್ 37 ರೂ.
ವಿಶ್ವೇಶ್ವರಯ್ಯ ಲೇಔಟ್ 15 ರೂ.
ಇನ್ನು ಯಾವ್ಯಾವ ಬಡಾವಣೆಯಲ್ಲಿ ಎಷ್ಟು ಸುಧಾರಣ ಶುಲ್ಕ ನಿಗದಿ ಅನ್ನೋದು ನೋಡುವುದಾದರೆ. ಅರ್ಕಾವತಿ ಲೇಔಟ್‌ನಲ್ಲಿ ಚದರಡಿಗೆ 336 ರೂಪಾಯಿ ಮಾಡಿದ್ರೆ, ಬನಶಂಕರಿ 6ನೇ ಹಂತದಲ್ಲಿ ಚದರ ಅಡಿಗೆ 99 ರೂಪಾಯಿ ನಿಗದಿ ಮಾಡಲಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 74 ರೂಪಾಯಿ ಮಾಡಿದ್ರೆ, ಜ್ಞಾನಭಾರತಿ ಲೇಔಟ್‌ನಲ್ಲಿ 73 ರೂಪಾಯಿ, ಜೆ.ಪಿ ನಗರ 9ನೇ ಹಂತದಲ್ಲಿ 48 ರೂಪಾಯಿ ನಿಗದಿ ಮಾಡಿದರೆ, ಅಂಜನಪುರ ಲೇಔಟ್‌ನಲ್ಲಿ 37 ರೂಪಾಯಿ ನಿಗದಿ ಮಾಡಲಾಗಿದೆ. ಹಾಗೆಯೇ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ 15 ರೂಪಾಯಿ ಸುಧಾರಣ ಶುಲ್ಕ ನಿಗದಿ ಮಾಡಲಾಗಿದೆ.
ಸುಧಾರಣಾ ಶುಲ್ಕದಿಂದ 3,000 ಕೋಟಿ ಆದಾಯ!
ಬಿಡಿಎ ವ್ಯಾಪ್ತಿಯಲ್ಲಿ 22 ಲೇಔಟ್‌ಗಳಿಂದಲೂ ಸುಧಾರಣ ಶುಲ್ಕ ವಸೂಲಿಯಾದರೆ ವಾರ್ಷಿಕವಾಗಿ ಬಿಡಿಎ ಬೊಕ್ಕಸಕ್ಕೆ 3 ಸಾವಿರ ಕೋಟಿಗೂ ಅಧಿಕ ಹಣ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ. ಇದರಿಂದಾಗಿ ಭೂ ಮಾಲೀಕರ ಜೇಬಿಗೆ ಕತ್ತರಿ ಬೀಳುವುದಂತೂ ಗ್ಯಾರಂಟಿ. ಒಂದೊಮ್ಮೆ ಸುಧಾರಣ ಶುಲ್ಕ ವಿಧಿಸಿಯೂ ಪಾವತಿಸದೇ ಇದ್ದರೆ ತಿಂಗಳಿಗೆ 2% ನಂತೆ ದಂಡ ವಿಧಿಸಲೂ ಬಿಡಿಎ ಪ್ಲ್ಯಾನ್ ಮಾಡಿದೆ. ಒಟ್ಟಾರೆ ಕಡಿಮೆ ದರ ಅಂತ ಬಿಡಿಎನಲ್ಲಿ ಸೈಟ್ ಕೊಂಡವರ ಮೇಲೆ ಬಿಡಿಎ ಈಗ ಸುಧಾರಣ ಶುಲ್ಕದ ಬ್ರಹ್ಮಾಸ್ತ್ರ ಬಿಡಲು ಮುಂದಾಗಿದೆ.
ಬಿಡಿಎ ಸೈಟ್ ಕೊಂಡವರಿಗೆ GBAನಿಂದ ಶಾಕ್; ಆದಾಯ ಹೆಚ್ಚಿಸಿಕೊಳ್ಳೋಕೆ ಹೊಸ ಶುಲ್ಕ!
