Ad image

ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯ್ತಾರೆ – ಟ್ರಂಪ್‌ ಮಾರ್ಮಿಕ ಸಂದೇಶ

Team SanjeMugilu
1 Min Read

ವಾಷಿಂಗ್ಟನ್‌: ಮಿಲಿಟರಿ ಕಾರ್ಯಾಚರಣೆ ಸಮಯದಲ್ಲಿ ಇರಾನ್‌ನ ನಾಯಕತ್ವದ ವ್ಯಕ್ತಿಗಳನ್ನ ಗುರಿಯಾಗಿಸುತ್ತಿದ್ದೇವೆ. ಹೀಗಾಗಿ ಅಮೆರಿಕ ಈಗ ಅತ್ಯಂತ ಪ್ರಬಲ ಸ್ಥಾನದಲ್ಲಿದೆ. ಇರಾನ್‌ಗೆ ನಾಯಕರಾಗಲು ಬಯಸುವ ಪ್ರತಿಯೊಬ್ಬರೂ ಸಾಯುತ್ತಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಎಚ್ಚರಿಕೆ ನೀಡಿದ್ದಾರೆ.

ಶ್ವೇತಭವನದಲ್ಲಿ ತಂತ್ರಜ್ಞಾನ ಕಾರ್ಯನಿರ್ವಾಹಕರೊಂದಿಗೆ ಮಾತನಾಡಿದ ಟ್ರಂಪ್, ಇರಾನ್‌ ಜೊತೆಗಿನ ಮಿಲಿಟರಿ ಕಾರ್ಯಕ್ಷಮತೆಗೆ ತನ್ನ ಸೇನೆಗೆ ಅಸಾಧಾರಣ ಅಂಕ ಕೊಟ್ಟಿದ್ದಾರೆ. ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲೇ ಕಾರ್ಯಾಚರಣೆಯು ತ್ವರಿತ ಪ್ರಗತಿ ಸಾಧಿಸಿದೆ. ಅಮೆರಿಕ ಮತ್ತು ಅದರ ಮಿತ್ರಪಕ್ಷಗಳು ಮೇಲುಗೈ ಸಾಧಿಸುತ್ತಿವೆ. ಒಂದೇ ಮಾತಿನಲ್ಲಿ ಹೇಳುವುದಾದ್ರೆ 10 ರಲ್ಲಿ ಎಷ್ಟು ಅಂಕ ಕೊಡ್ತೀರಿ ಅಂತ ಯಾರೋ ಕೇಳಿದ್ರು, ಆದ್ರೆ ನಾನು 15 ಅಂಕ ಕೊಡ್ತೀನಿ ಅಂತ ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದುವರಿದು… ಅಮೆರಿಕವು ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವತ್ತ ಸಾಗುತ್ತಿದೆ. ಏಕೆಂದ್ರೆ ಹುಚ್ಚು ಜನರು ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿರುವಾಗ ಕೆಟ್ಟ ವಿಷಯಗಳು ಸಂಭವಿಸುತ್ತವೆ. ನಾವು ಈ ದಾಳಿಯಲ್ಲಿ ಮುಂದುವರಿಯುತ್ತೇವೆ. ಅಮೆರಿಕ ಮತ್ತು ಮಿತ್ರರಾಷ್ಟ್ರಗಳ ಮೇಲಿನ ಬೆದರಿಕೆಗಳನ್ನ ತಡೆಯಲು ಇದು ಅನಿವಾರ್ಯಕೂಡ ಆಗಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ನಮ್ಮ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಅಮೆರಿಕ ಪಡೆಯ ದಾಳಿಗಳು ಈಗಾಗಲೇ ಇರಾನ್‌ನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತಿವೆ, ಯುದ್ಧದ ಸೌಲಭ್ಯಗಳನ್ನು ಹಾನಿಗೊಳಿಸಿವೆ. ಯುದ್ಧ ಮುಗಿದ ಬಳಿಕ ವಿವರವಾದ ಯೋಜನೆ ರೂಪಿಸುವುದಾಗಿ ಟ್ರಂಪ್‌ ತಿಳಿಸಿದ್ದಾರೆ.

5ನೇ ದಿನಕ್ಕೆ ಕಾಲಿಟ್ಟ ಯುದ್ಧ
ಮಾರ್ಚ್‌ 1 ರಂದು ಇಸ್ರೇಲ್‌ – ಅಮೆರಿಕ ಜಂಟಿ ದಾಳಿಯಿಂದ ಶುರುವಾದ ಯುದ್ಧ 5ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಸ್ಫೋಟದ ಸದ್ದು ಮುಂದುವರಿದಿವೆ. ಈ ಮಧ್ಯೆ ನಾಟಕೀಯ ಬೆಳವಣಿಯೆಲ್ಲಿ, ಶ್ರೀಲಂಕಾ ಕರಾವಳಿಯಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆ ಇರಾನಿನ ಯುದ್ಧನೌಕೆಯನ್ನ ಮುಳುಗಿಸಿದ್ದು, ಸಂಘರ್ಷವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇದಕ್ಕೆ ಇರಾನ್‌ ಕೂಡ ಪ್ರತಿದಾಳಿ ಶುರು ಮಾಡಿದೆ.

Share This Article