Ad image

ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ; ಮನೆಗೆ ನುಗ್ಗಿ ಅಟ್ಯಾಕ್ ಮಾಡಿದ ಗ್ಯಾಂಗ್!

Team SanjeMugilu
1 Min Read

ಬೆಂಗಳೂರು: ದಾವಣಗೆರೆ ಉಪಚುನಾವಣೆಯ  ಅಭ್ಯರ್ಥಿ,‘ಯಂಗ್ ಸ್ಟಾರ್ ಎಂಪೋರಿಯಂ’ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶಹಬಾಜ್ ಖಾನ್​ಗೆ ಈ ಹಿಂದೆ ಹಲ್ಲೆ ನಡೆಸಿ, ಕಸದ ಬುಟ್ಟಿಗೆ ಹಾಕುತ್ತೇವೆ ಎಂದು ಬೆದರಿಕೆಯೊಂದು ಬಂದಿತ್ತು. ಅದರಂತೆಯೇ ನಗರದ ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಪಕ್ಷದಿಂದ ವಜಾಗೊಳಿಸಿದ್ದಕ್ಕೆ ಗ್ಯಾಂಗ್ ಕಟ್ಟಿಕೊಂಡು ಬಂದ ಮಹಿಳೆ
ಶಹಬಾಜ್ ಖಾನ್ ದಾವಣಗೆರೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಇತ್ತೀಚೆಗೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ಮಧ್ಯೆ ಮುಹಮ್ಮದ್ ವಸೀಂ ಎಂಬಾತ ಶಹಬಾಜ್ ಖಾನ್ ವಿರುದ್ಧ ವೀಡಿಯೋ ಮಾಡಿ ಅವಹೇಳನಕಾರಿ ಮಾತುಗಳನ್ನಾಡಿದ್ದನು. ಈ ಕುರಿತು ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಇದಾದ ನಂತರ ಅದೇ ಪಕ್ಷದ ಹಸೀನಾ ಬಾನು ಕೂಡ ವೀಡಿಯೋ ಮಾಡಿ ಶಹಬಾಜ್ ಖಾನ್ಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಶಹಬಾಜ್ ಖಾನ್ ಹಸೀನಾ ಬಾನುವನ್ನು ಪಕ್ಷದಿಂದ ವಜಾಗೊಳಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಸೀನಾ ಬಾನು, ಝೈದ್, ನಿಲೂಫರ್, ಮುಹಮ್ಮದ್ ವಸೀಂ ಸೇರಿದಂತೆ 5-6 ಜನ ಶಹಬಾಜ್ ಖಾನ್ ನಿವಾಸಕ್ಕೆ ನುಗ್ಗಿ, ಮುಂಚಿತವಾಗಿ ವೀಡಿಯೋದಲ್ಲಿ ಹಾಕಿದ ಬೆದರಿಕೆಯಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ನಂತರ ಗಾಯಗೊಂಡ ಶಹಬಾಜ್ ಖಾನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸುದ್ದುಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share This Article