Ad image

ಐಪಿಎಲ್ ನಕಲಿ ಟಿಕೆಟ್ ದಂಧೆಗೆ ಬೆಂಗಳೂರು ಪೊಲೀಸರ ಡಿಜಿಟಲ್ ಬ್ರೇಕ್!

Team SanjeMugilu
1 Min Read

ಬೆಂಗಳೂರು: ಐಪಿಎಲ್  ಕ್ರಿಕೆಟ್‌ ಹಬ್ಬದ ನಡುವೆಯೇ ಬೆಂಗಳೂರಿನಲ್ಲಿ  ನಕಲಿ ಟಿಕೆಟ್ ಜಾಲ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ದಂಧೆಗೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಈಗ ಸಂಪೂರ್ಣವಾಗಿ ಆನ್‌ಲೈನ್ ಟಿಕೆಟ್ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ.

ಇತ್ತೀಚೆಗೆ ನಡೆದ ಆರ್‌ಸಿಬಿ ಮತ್ತು ಎಸ್‌ಆರ್‌ಹೆಚ್‌ ಪಂದ್ಯದ ವೇಳೆ 1,500 ರೂ. ಮೌಲ್ಯದ ಫಿಸಿಕಲ್ ಟಿಕೆಟ್‌ಗಳನ್ನು ವಿತರಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ಅಸಲಿ ಟಿಕೆಟ್‌ ಹೋಲುವ ನಕಲಿ ಟಿಕೆಟ್‌ಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.

ಪಂದ್ಯ ನೋಡಲು ಬಂದ ಅಭಿಮಾನಿಗಳು ಟಿಕೆಟ್ ಸ್ಕ್ಯಾನ್ ಮಾಡಿದಾಗ ಅವು ಕಾರ್ಯನಿರ್ವಹಿಸದಿದ್ದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ವೇಳೆ ಬೃಹತ್ ನಕಲಿ ಟಿಕೆಟ್ ಜಾಲ ಪತ್ತೆಯಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮುಂಬರುವ ಆರ್‌ಸಿಬಿ ಮತ್ತು ಸಿಎಸ್‌ಎಕೆ ಪಂದ್ಯದ 1,500 ರೂ. ಮೌಲ್ಯದ ಟಿಕೆಟ್‌ಗಳನ್ನು ಸಹ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ವಿತರಿಸಲು ನಿರ್ಧರಿಸಲಾಗಿದೆ.

ದೇಶಾದ್ಯಂತ ಮೆಚ್ಚುಗೆ
ಬೆಂಗಳೂರು ಪೊಲೀಸರು ಈ ಬಾರಿ ಐಪಿಎಲ್ ಟಿಕೆಟ್ ಜೊತೆಯಲ್ಲೇ ಮೆಟ್ರೋ ಟಿಕೆಟ್ ಸೇರಿಸುವ  ವಿನೂತನ ಪ್ರಯತ್ನ ಮಾಡಿದ್ದರು. ಈ ಪ್ರಯೋಗಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಬೆಂಗಳೂರಿನ ಈ ಯಶಸ್ವಿ ಮಾದರಿಯನ್ನು ಗಮನಿಸಿರುವ ಮುಂಬೈ, ಚೆನ್ನೈ ಹಾಗೂ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಮೆಟ್ರೋ ಅಧಿಕಾರಿಗಳು ಈಗ ಬಿಎಂಆರ್‌ಸಿಎಲ್‌ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಈ ವ್ಯವಸ್ಥೆಯನ್ನು ತಮ್ಮ ನಗರಗಳಲ್ಲೂ ಜಾರಿಗೆ ತರುವ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಬೆಂಗಳೂರು ಪೊಲೀಸರ ಮತ್ತು ಮೆಟ್ರೋ ಆಡಳಿತದ ಹಿರಿಮೆಯನ್ನು ಹೆಚ್ಚಿಸಿದೆ.

Share This Article