Ad image

42ರ ಆಂಟಿ ಜೊತೆ 28ರ ಜಿಮ್ ಟ್ರೈನರ್‌ಗೆ ಸಂಬಂಧ? – ಬ್ಲಾಕ್ ಮೇಲ್‌ಗೆ ಸಿಲುಕಿ ಯುವಕ ಆತ್ಮಹತ್ಯೆ

Team SanjeMugilu
1 Min Read

ನೆಲಮಂಗಲ: ವಿವಾಹಿತೆಯ ಮೋಹಕ್ಕೆ ಬಿದ್ದು, ಬ್ಲ್ಯಾಕ್‌ಮೇಲ್‌ಗೆ  ಸಿಲುಕಿದ್ದ 28 ವರ್ಷದ ಜಿಮ್‌ ಟ್ರೈನರ್‌ ನೇಣು ಬಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದ ವಾಜರಹಳ್ಳಿಯಲ್ಲಿ ನಡೆದಿದೆ.

ದಿಲೀಪ್ (28) ಮೃತ ಯುವಕನಾಗಿದ್ದು, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್  ಆಗಿ ಕೆಲಸ ಮಾಡಿಕೊಂಡಿದ್ದರು.

ಬಲೆಗೆ ಬೀಳಿಸಿಕೊಂಡಿದ್ಳಾ ಆಂಟಿ?
ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ವಿವಾಹಿತ ಮಹಿಳೆಯ  ಪರಿಚಯವಾಗಿತ್ತು. ಆಕೆಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ನಂತರ ಆಕೆ ಬ್ಲ್ಯಾಕ್‌ಮೇಲ್‌ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆಯ ಬ್ಲ್ಯಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ದಿಲೀಪ್‌ ಜೊತೆಗೆ ಸಂಬಂಧದಲ್ಲಿದ್ದಳು ಎನ್ನಲಾದ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಮ್‌ ಮೂಲಕ ದಿಲೀಪ್‌ ಸಹೋದರನಿಗೆ ಮೆಸೇಜ್‌ ಮಾಡಿದ್ದಾಳೆ. ನಿನ್ನ ಸಹೋದರ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಕೆ ತಿಳಿಸಿದ್ದಾಳೆ. ದಿಲೀಪ್‌ ಸಹೋದರ ಬಾಗಿಲು ಮುರಿದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮೃತದೇಹವನ್ನ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಹಾಗೂ ಸೊಕೊ ಟೀಂ ಭೇಟಿ ನೀಡಿ ಪರಿಶೀಲಿಸಿದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.

Share This Article