Ad image

ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ​, 450 ಕೋಟಿ ಹಿಂಬಾಕಿ ಬಾಕಿ ಹಣ ಬಿಡುಗಡೆ, ವೇತನ ಹೆಚ್ಚಳ ಯಾವಾಗ?

Team SanjeMugilu
2 Min Read

ಬೆಂಗಳೂರು: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ ಬಹುದಿನಗಳ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. 36 ತಿಂಗಳ ವೇತನ ಹಿಂಬಾಕಿ, ವೇತನ ಪರಿಷ್ಕರಣೆ ಆಗ್ರಹಿಸಿ ನೌಕರರು ಮುಷ್ಕರ ನಡೆಸಿದ್ದರು. ಆದ್ರೆ ಸರ್ಕಾರ  ಸಾರಿಗೆ ನೌಕರರ 26 ತಿಂಗಳ ಹಿಂಬಾಕಿ ಬಿಡುಗಡೆ ಮಾಡಿದೆ. ಈ ಮೂಲಕ ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ, ಮೊದಲ ಕಂತಿನ ಹಿಂಬಾಕಿ ಹಣ ಬಿಡುಗಡೆ ಮಾಡಿದೆ. ಒಟ್ಟು 450 ಕೋಟಿ ಹಣ ಬಿಡುಗಡೆ ಮಾಡಿ‌ ಆದೇಶ ಹೊರಡಿಸಿದೆ.
26 ತಿಂಗಳ ವೇತನ ಹಿಂಬಾಕಿ ಬಾಕಿ ರಿಲೀಸ್​
ಒಟ್ಟು 26 ತಿಂಗಳ, 1271.92 ಕೋಟಿ ಹಿಂಬಾಕಿ ಬಾಕಿ ವೇತನವನ್ನ ಸಾರಿಗೆ ಇಲಾಖೆ ಉಳಿಸಿಕೊಂಡಿತ್ತು. ಇದೀಗ ಮೊದಲ ಕಂತಾಗಿ 450 ಕೋಟಿ ಹಣ ಬಿಡುಗಡೆ ಮಾಡಿದೆ. ಇದರಲ್ಲಿ KSRTCಗೆ 143.85 ಕೋಟಿ, BMTCಗೆ 137.24 ಕೋಟಿ, NWKRTC 87 ಕೋಟಿ ಹಾಗೂ KKRTCಗೆ 81.91 ಕೋಟಿ ಹಂಚಿಕೆ ಮಾಡಲಾಗ್ತಿದೆ. 2021 ಜನವರಿ 1 ರಿಂದ 2023 ಫೆಬ್ರವರಿ ಹಿಂಬಾಕಿ ಮೊತ್ತವನ್ನ ಸರ್ಕಾರ ಬಿಡುಗಡೆ ಮಾಡಿದೆ.
ವೇತನ ಹೆಚ್ಚಳ ಮಾಡುವ ಬಗ್ಗೆ ಪ್ರಸ್ತಾವನೆ
2021ರ ಜ.1ರಿಂದ 2023ರ ಫೆ. 28ರವರೆಗೆ 26 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಲಾಗಿದೆ. 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಹಾಗೂ ಎನ್‌ಡಬ್ಲುಕೆಆರ್​ಟಿಸಿ, ಕೆಎಸ್‌ಆರ್​ಟಿಸಿ ಮತ್ತು ಕೆಕೆಆರ್​ಟಿಸಿ ಸೇರಿ ಉಳಿದ ಮೂರು ನಿಗಮದ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಅಕ್ರಂ ಪಾಷಾ ಅವರು ಸಮಿತಿ ಮುಖಂಡರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ.
ಆಕ್ಷೇಪ ಎತ್ತಿದ ಸಮಿತಿ ಮುಖಂಡರು 26 ತಿಂಗಳ ವೇತನ ಹಿಂಬಾಕಿ ಜೊತೆಗೆ 2020 ಜನವರಿ 1ರಿಂದ ಡಿಸೆಂಬರ್ 31ರವರೆಗಿನ 12 ತಿಂಗಳದ್ದು ಸೇರಿ ಎಲ್ಲ ತಿಂಗಳ ವೇತನ ಹಿಂಬಾಕಿ ಪಾವತಿಸುವಂತೆ ಆಗ್ರಹಿಸಿದರು. ಇದರೊಂದಿಗೆ ವೇತನ ಹೆಚ್ಚಳವನ್ನು ಸಭೆಯಲ್ಲಿ ಪ್ರಕಟಿಸುವಂತೆ ಅವರು ಮನವಿ ಮಾಡಿದರು.
ವೇತನ ಹೆಚ್ಚಳ ಸಂಬಂಧ ಇಂದು ಸಭೆ
ಸಾರಿಕೆ ನೌಕರರರ ವೇತನ ಹೆಚ್ಚಳ ಕುರಿತು ಇಂದು ಸಭೆ ನಡಯಲಿದ್ದು, ಬಹು ದಿನಗಳ ಸಾರಿಕೆ ನೌಕರರ ವೇತನ ಹೆಚ್ಚಳ ಬೇಡಿಕೆ ಈಡೇರುತ್ತಾ? ಹಲವು ದಿನಗಳಿಂದ ನೌಕರರು ಸಂಘಟನೆ ನಡೆಸುತ್ತಿರುವ ಹೋರಾಟಕ್ಕೆ ಜಯ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಬಸ್​ ದರ ಏರಿಗೆ ಆಗುತ್ತಾ?
ಮಧ್ಯಪ್ರಾಚ್ಯ ರಾಷ್ಟ್ರಗಳ ಬಿಕ್ಕಟ್ಟಿನಿಂದ ತೈಲ ಪೂರೈಕೆ ಕೊರತೆ ಉಂಟಾಗಿದೆ. ಇದರಿಂದ ಇಂಧನ ಬೆಲೆ ಏರಿಕೆ ಆಗುತ್ತದೆ ಎಂಬ ವದಂತಿಗಳು ಹರಿದಾಡುತ್ತಿವೆ. ಸದ್ಯಕ್ಕೆ ಕೆಎಸ್‌ಆರ್​ಟಿಸಿ ಸೇರಿ ಸಾರಿಗೆ ಬಸ್‌ಗಳ ಪ್ರಯಾಣ ದರ ಹೆಚ್ಚಿಸುವುದಿಲ್ಲ ಎನ್ನುವ ಮೂಲಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ರಾಜ್ಯ ಜನರಿಗೂ ಗುಡ್‌ನ್ಯೂಸ್ ನೀಡಿದ್ದಾರೆ.

Share This Article