ಬೆಂಗಳೂರು: ಕುರುಬರನ್ನು STಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು ಅಂತ ಮೊದಲ ಬಾರಿಗೆ ಕುರುಬ ಸಮುದಾಯವನ್ನು STಗೆ ಸೇರಿಸೋ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಉಗ್ರಪ್ಪ ಮಾತಾನಾಡಿ ST ಸಮುದಾಯಕ್ಕೆ ಕುರುಬರನ್ನ ಸೇರಿಸಿ ನಮ್ಮ ತಟ್ಟೆಗೆ ಸಿದ್ದರಾಮಯ್ಯ ಕೈ ಹಾಕಬಾರದು. ಕುರುಬರನ್ನ STಗೆ ಸೇರಿಸಬೇಕಾದ್ರೆ ಮೀಸಲಾತಿ ಪ್ರಮಾಣ ಹೆಚ್ವಳ ಮಾಡಬೇಕು. ಇಲ್ಲದೆ ಹೋದ್ರೆ ಹೋರಾಟ ಮಾಡೋ ಎಚ್ಚರಿಕೆ ಕೊಟ್ಟರು. ಈ ವಿಚಾರಕ್ಕೆ ಸಿಎಂ ಉತ್ತರ ಕೊಟ್ಟಿದ್ದಾರೆ.
ವೇದಿಕೆ ಮೇಲೆ ಮಾತನಾಡಿದ ಸಿಎಂ, ಕುರುಬರನ್ನು STಗೆ ಸೇರಿಸಿದರೆ ST ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಎನ್ನುವುದಕ್ಕೆ ನನ್ನ ಬೆಂಬಲ, ಸಹಮತವೂ ಇದೆ. ಯಾರೂ ಯಾರ ಅನ್ನದ ತಟ್ಟೆಗೆ ಕೈ ಹಾಕಬಾರದು. ಯಾರೂ ಯಾರ ಅವಕಾಶಗಳನ್ನೂ ಕಿತ್ತುಕೊಳ್ಳಬಾರದು ಎನ್ನುವುದು ನನ್ನ ಬದ್ಧತೆ ಎಂದು ಸ್ಪಷ್ಟಪಡಿಸಿದರು. ಕುರುಬರನ್ನು STಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದು ಬೊಮ್ಮಾಯಿ ಸರ್ಕಾರ. ಆ ಶಿಫಾರಸ್ಸಿನ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಂದ್ರ ಕೇಳಿದೆ. ಅದಷ್ಟೇ ನಮ್ಮೆದುರಿಗಿದೆ ಎಂದು ಅವರು ಸ್ಪಷ್ಟಪಡಿಸಿದರು.