Ad image

ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿ ಸನ್ಮಾನ

Team SanjeMugilu
1 Min Read

ಉಡುಪಿ : ಪ್ರಧಾನಿ ನರೇಂದ್ರ ಮೋದಿ  ಅವರು ಕೃಷ್ಣನೂರಿಗೆ ಆಗಮಿಸಿದ್ದು, ಶ್ರೀಕೃಷ್ಣನ ದರ್ಶನ ಪಡೆದಿದ್ದಾರೆ. ಕರಾವಳಿ ಜನರು ಪ್ರಧಾನಿ ಮೋದಿಯನ್ನು ಅದ್ಧೂರಿಯಾಗಿ ಸ್ವಾಗತಿಸಿದ್ರು. ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿ ಸನ್ಮಾನ ಮಾಡಲಾಗಿದೆ. ಕೃಷ್ಣನಗರಿಯಲ್ಲಿ ನಮೋ ಹವಾ ಜೋರಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನ ದರ್ಶನ ಪಡೆದಿದ್ದಾರೆ. ದೇವರ ದರ್ಶನದ ಬಳಿಕ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಮೋದಿಗೆ ಭಾರತ ಭಾಗ್ಯವಿಧಾತ ಬಿರುದು ನೀಡಿ ಸನ್ಮಾನ ಮಾಡಲಾಗಿದೆ. ಪ್ರಧಾನಿ ಮೋದಿಗೆ ಬೆಳ್ಳಿಯ ಕಡೆಗೋಲು ಕೊಡುಗೆ ನೀಡಿದ್ದಾರೆ.
ಸಾವಿರಾರು ಭಕ್ತರಿಂದ ಗೀತೆಯ ಪಠಣ
ಕೃಷ್ಣನ ಮಡಿಲಲ್ಲಿ ಭಕ್ತಿ, ಕಣ್ಣಲ್ಲಿ ತೇಜಸ್ಸು ತುಂಬಿಕೊಂಡ ಪ್ರಧಾನಿ ಮೋದಿ ನಂತರ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ಸಂಪ್ರದಾಯದಂತೆ ಪ್ರದಕ್ಷಿಣೆ ಹಾಕಿದರು. ದರ್ಶನದ ಸಮಯದಲ್ಲಿ ಮಠದೊಳಗೆ ಸಾಂಸ್ಕೃತಿಕ–ಆಧ್ಯಾತ್ಮಿಕ ಚೈತನ್ಯ ಮನೆ ಮಾಡಿತು. ಉಡುಪಿ ಮಠದಲ್ಲಿ ನಡೆಯುತ್ತಿದ್ದ ಲಕ್ಷ ಗೀತಾ ಕಂಠ ಗೀತಾರಾಧನೆಯಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಿದರು. ಸಾವಿರಾರು ಭಕ್ತರಿಂದ ಗೀತೆಯ ಪಠಣ ಹೇಗೋ, ಅದೇ ರೀತಿ ಪ್ರಧಾನ ಮಂತ್ರಿಗಳೂ ಸಂಯಮ ಹಾಗೂ ಭಾವಪೂರ್ಣವಾಗಿ ಗೀತಾ ಪಠಣದೊಂದಿಗೆ ತೊಡಗಿಸಿಕೊಂಡರು.
ಮಠದಲ್ಲಿನ ವಿವಿಧ ದೇವರ ದರ್ಶನ ಪಡೆದ ಮೋದಿ ಕನಕನ ಕಿಂಡಿಯ ಮೂಲಕ ಭಗವಾನ್​ ಶ್ರೀ ಕೃಷ್ಣನ ದರ್ಶನ ಪಡೆದರು. ಅಲ್ಲದೇ ಸ್ವರ್ಣ ಲೇಪಿತ ಕನಕನ ಕಿಂಡಿ ಉದ್ಘಾಟಿಸಿ, ಗೀತಲೇಖ ಯಜ್ಞ ದೀಕ್ಷೆ ಪಡೆದರು. ನಂತರ ಸಂಪ್ರದಾಯದಂತೆ ಪ್ರದಕ್ಷಿಣೆ ಹಾಕಿದರು. ಉಡುಪಿಯ ಬೃಂದಾವನದಲ್ಲಿ ಭಕ್ತಿ- ಭಾವ ಮನೆ ಮಾಡಿತ್ತು. ಅಲ್ಲದೇ ಭಗವದ್ಗೀತೆಯ 10 ಶ್ಲೋಕ ಪಠಣೆ ಮಾಡಿದರು.

Share This Article