Ad image

ರಾಜ್ಯಪಾಲರ ಕಚೇರಿಗೆ ಬಾಂಬ್​ ಬೆದರಿಕೆ; ಮಧ್ಯಾಹ್ನವೇ ಬ್ಲ್ಯಾಸ್ಟ್​ ಎಂದು ಇಮೇಲ್​!

Team SanjeMugilu
1 Min Read

ಬೆಂಗಳೂರು : ಇತ್ತೀಚಿಗೆ ಬಾಂಬ್ ಬೆದರಿಕೆ  ಕರೆಗಳೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ರಾಜ್ಯದ ಶಾಲೆಗಳಾಯ್ತು, ಕೋರ್ಟು-ಸರ್ಕಾರಿ ಕಚೇರಿಗಳೂ ಆಯ್ತು. ಇದೀಗ ರಾಜ್ಯಪಾಲರ ಕಚೇರಿಗೆ  ಬಾಂಬ್​ ಬೆದರಿಕೆ ಇಮೇಲ್ ಬಂದಿದೆ. ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನವೇ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಬರೆದಿದ್ದ ಇಮೇಲ್ ಒಂದು ರಾಜ್ಯಪಾಲರ ಕಚೇರಿಗೆ ಬಂದಿದೆ ಎಂದು ತಿಳಿದು ಬಂದಿದೆ.
ಹುಸಿ ಬಾಂಬ್ ಬೆದರಿಕೆ
ಇದೇ ತಿಂಗಳ 14 ರಂದು ಈ ಹುಸಿ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಇನ್ನೂ ಹುಸಿ ಬಾಂಬ್ ಬೆದರಿಕೆ ಕರೆಗಳು ನಿಂತಿಲ್ಲ. ರಾಜ್ಯಪಾಲರ ಕಚೇರಿಗೆ ಬಂದಿರೋದು ಕೂಡ ಹುಸಿ ಬಾಂಬ್ ಬೆದರಿಕೆ ಆಗಿದೆ.
ಇಮೇಲ್​ನಿಂದ ಸಂದೇಶ
ಆರ್ ಡಿಎಕ್ಸ್, ಐಇಡಿ ಬಾಂಬ್ ಇಟ್ಟಿದ್ದು ಮಧ್ಯಾಹ್ನ ಬಾಂಬ್ ಬ್ಲಾಸ್ಟ್ ಆಗುತ್ತೆ ಎಂದು ಇಮೇಲ್​ನಲ್ಲಿ ಬರೆಯಲಾಗಿದೆ. ಐಇಡಿ ಬಾಂಬ್ ಇಟ್ಟು, ಇಬ್ಬರು ಟ್ರಿಗರ್ ಇಟ್ಟುಕೊಂಡಿದ್ದಾರೆ ಅಂತನು ಬರೆದಿದ್ದು. gaina_ramesh@outlook.com ಎಂಬ ಇಮೇಲ್ ನಿಂದ ಈ ಸಂದೇಶ ಬಂದಿದೆ.
‘ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ’
ಬಳಿಕ ಕಚೇರಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ಪೊಲೀಸರು ಪರಿಶೀಲನೆ ಮಾಡಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article