Ad image

ಹಳೆ ವೈಷಮ್ಯಕ್ಕೆ ಕಲ್ಲಿನಿಂದ ಕಾಲು ಜಜ್ಜಿ ಹಲ್ಲೆ – 11 ಆರೋಪಿಗಳು ಅರೆಸ್ಟ್

Team SanjeMugilu
1 Min Read

ಮಂಡ್ಯ: ಹಳೆ ವೈಷಮ್ಯಕ್ಕೆ ಕಲ್ಲಿನಿಂದ ಕಾಲು ಜಜ್ಜಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಂಧಿಸಿದಂತೆ ಪೊಲೀಸರು 11 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ನವೀನ್, ಪ್ರಕಾಶ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದ ಗಿರೀಶ್, ಮದ್ದಪ್ಪ, ಪ್ಲಗ್ ಮಂಜ, ಗಣೇಶ, ಶಿವಣ್ಣ, ನಿಂಗಣ್ಣ ಸೇರಿ 11 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಫೆ.22ರಂದು ಪಾಂಡವಪುರದ ಕನಗನಹಳ್ಳಿಯಲ್ಲಿ ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು. ಯುವತಿಯೋರ್ವಳು ಪ್ರೀತಿಸಿ ಮದುವೆಯಾಗಲು ಕಾರಣ ಎಂದು ಪ್ರಕಾಶ್ ಮೇಲೆ ದ್ವೇಷವಿತ್ತು. ಇದೇ ದ್ವೇಷದಿಂದ ಪ್ರಕಾಶ್ ಹಾಗೂ ಅವರ ಭಾಮೈದ ನವೀನ್ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದರು. ನವೀನ್ ಕಾಲನ್ನ ಸೈಜ್‌ಗಲ್ಲಿನಿಂದ ಜಜ್ಜಿ ಹಾಕಿದ್ದರು. ಭೀಕರ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿದುಬಿಟ್ಟಿದ್ದರು. ಬಳಿಕ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದರು. ಪಾಂಡವಪುರ ಠಾಣೆಯ ಇನ್ಸ್ಪೆಕ್ಟರ್ ಶರತ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ, ಮೊದಲ ದಿನವೇ ಇಬ್ಬರನ್ನ ಬಂಧಿಸಿದ್ದರು. ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಸಂಬಂಧಿಕರ ಮನೆಗಳಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಇದೀಗ 14 ಆರೋಪಿಗಳ ಪೈಕಿ 11 ಮಂದಿ ಬಂಧನವಾಗಿದೆ.

Share This Article