Ad image

ಮುಕ್ತಾಯ ಹಂತಕ್ಕೆ ತಲುಪಿದ ರಾಯ್ ಆತ್ಮಹತ್ಯೆ ಕೇಸ್ ತನಿಖೆ – ಮುಂದಿನ ವಾರ ವರದಿ ಸಲ್ಲಿಕೆ

Team SanjeMugilu
1 Min Read

ಬೆಂಗಳೂರು: ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಮುಂದಿನ ವಾರದಲ್ಲಿ ತನಿಖಾ ತಂಡ ತನಿಖೆಯ ವರದಿ ನೀಡಲಿದೆ.

ಸಿಜೆ ರಾಯ್ ಆತ್ಮಹತ್ಯೆ ಸಂಬಂಧ ಈವರೆಗೂ ಅಧಿಕಾರಿಗಳು ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ರಾಯ್ ಆತ್ಮಹತ್ಯೆ ಮಾಡಿಕೊಂಡ ಜಾಗದ ಹಲವು ಬಗೆಯ ಸ್ಯಾಂಪಲ್‌ಗಳು ಕಲೆಕ್ಟ್ ಮಾಡಿ, ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದರು. ಈಗ ಅದರ ರಿಪೋರ್ಟ್ ಕೂಡ ಬಂದಿದೆ. ಅದರ ಜೊತೆಗೆ ಕುಟುಂಬಸ್ಥರ ಹೇಳಿಕೆ, ಐಟಿ ಅಧಿಕಾರಿಗಳ ಹೇಳಿಕೆ, ರಾಯ್ ಅಪ್ತರ ಹೇಳಿಕೆ, ಖಾಸಗಿ ಮತ್ತು ವ್ಯಾವಹಾರಿಕ ಸಂಬಂಧ ಕೂಲಂಕುಷವಾಗಿ ತನಿಖೆ ನಡೆಸಿ ವರದಿ ಸಿದ್ದಪಡಿಸಿದ್ದಾರೆ.

ತನಿಖೆಯಾದರೂ ಕೂಡ ಸಿಜೆ ರಾಯ್ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಯಾವುದೇ ಮಾಹಿತಿ ಗಳು ಬಯಲಾಗಿಲ್ಲ. ಬದಲಾಗಿ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ ಅಂತಷ್ಟೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಆ ಖಿನ್ನತೆಗೆ ಕಾರಣಗಳೇನು ಅನ್ನೋದು ಸದ್ಯ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.  ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಅವರು 2026 ಜ.30ರಂದು ತಮ್ಮ ಕಾನ್ಫಿಡೆಂಟ್ ಕಚೇರಿಯಲ್ಲಿಯೇ ಶೂಟ್ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು.

Share This Article