ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಬಾರಿ ಬಿಜೆಪಿ ಗೆಲ್ಲಿಸಿ. ಮಾದರಿ ಕ್ಷೇತ್ರವನ್ನಾಗಿಸಲು ಬಿಜೆಪಿ ಶ್ರಮಿಸಲಿದೆ. ಅಭಿವೃದ್ಧಿ ವಿರೋಧಿ, ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು, ಲಂಚದ ಸರ್ಕಾರ ಕಿತ್ತೊಗೆಯಲು ಬಿಜೆಪಿ ಬೆಂಬಲಿಸಿ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಅವರು ಮನವಿ ಮಾಡಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದಲ್ಲಿ ಒಂದೇ ಮನೆಯವರಿಗೆ ಅಧಿಕಾರ ಸಿಕ್ಕರೆ ದರ್ಪ ಹೆಚ್ಚುತ್ತೆ. ಜನರಿಗೆ ಸ್ಪಂದಿಸುವುದಿಲ್ಲ. ಅವರು ಮಾತನಾಡುವ ಶೈಲಿ ಸಹ ಬದಲಾಗುತ್ತೆ. ಈ ಸರ್ವಾಧಿಕಾರ ದಿಕ್ಕರಿಸಿ ಬಿಜೆಪಿ ಬೆಂಬಲಿಸಿ. ಕ್ಷೇತ್ರದಲ್ಲಿ ದಲಿತ ಮುಖಂಡನನ್ನು ಗುರುತಿಸಿ ಬಿಜೆಪಿ ಟಿಕೆಟ್ ನೀಡಿದೆ. ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಮನೆಯ ಮಗನಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ ಎಂದರು.
ದಕ್ಷಿಣ ಕ್ಷೇತ್ರದಲ್ಲಿ ಸಂಪರ್ಕ ವ್ಯವಸ್ಥೆ ಸುಧಾರಣೆ, ಕುಡಿಯವ ನೀರು, ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ, ನಗರ ನಿರ್ವಹಣೆ, ಶಿಕ್ಷಣ ಮುಂತಾದವುಗಳಿಗೆ ಆದ್ಯತೆ ನೀಡಲಾಗುವುದು ಎಂದರು.
ಈ ಉಪ ಚುನಾವಣೆಯಲ್ಲಿ ಒಂದೇ ಕುಟುಂಬ ಬಿಟ್ಟು ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಿಗೆ ಟಿಕೆಟ್ ಸಿಗುತೆ ಅಂತ ಕಾಂಗ್ರೆಸ್ಸಿಗರು ಆಸೆ ಪಟ್ಟಿದ್ರು. ಆದರೆ ಆ ಆಸೆಗೆ ತಣ್ಣೀರು ಎರಚಿದರು. ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ಮುಸ್ಲಿಮರನ್ನು ಹತ್ತಿರಕ್ಕೆ ಸೇರಿಸಲಿಲ್ಲ. ಶಾಮನೂರು ಇದ್ದಾಗಲೇ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುವುದು ಎಂದು ಹೇಳಿದ್ದರು. ಈಗ ಈ ಅಲ್ಪಸಂಖ್ಯಾತರೇ ರೊಚ್ಚಿಗೆದ್ದಿದ್ದಾರೆ ಎಂದರು.
ಶಾಮನೂರು ಕುಟುಂಬಕ್ಕೆ ಮತ್ತೆ ಈ ಬಾರಿ ಟಿಕೆಟ್ ನೀಡಿದ್ದರಿಂದ ಸದ್ಯ ಒಂದೆರಡು ತಲೆಮಾರು ಬೇರೆಯವರು ಟಿಕೆಟ್ ನಿರೀಕ್ಷೆ ಮಾಡುವಂತಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಮಾತ್ರ ಅಲ್ಪಸಂಖ್ಯಾತರಿಗೆ ಅವಕಾಶ ಸಿಗಬಹುದು. ಶಾಮನೂರು ಕುಟುಂಬದವರೇ ಸಚಿವರು ಇದ್ದಾರೆ, ಸಂಸದೆ ಇದ್ದಾರೆ. ಈಗ ಮಗನಿಗೆ ಟಿಕೆಟ್ ನೀಡಿದ್ದಾರೆ. ಶಾಮನೂರು ಕುಟುಂಬಕ್ಕೆ ಅಧಿಕಾರ ಬೇಕು. ಆದರೆ ಕ್ಷೇತ್ರದ ಜನರಿಗೆ ಅಭಿವೃದ್ಧಿ ಬೇಕಾಗಿದೆ ಎಂದು ವಿಶ್ಲೇಷಿಸಿದರು.
ಕ್ಷೇತ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನು ಕಾಂಗ್ರೆಸ್ ಮಾಡಲಿಲ್ಲ. ಒಂದೇ ಒಂದು ಶಂಕುಸ್ಥಾಪನೆ ನಡೆದಿಲ್ಲ. ಸಿದ್ದರಾಮಯ್ಯ ಅವರು ಸಾಲದ ರಾಮಯ್ಯ ಆಗಿದ್ದಾರೆ. ಅವರು ಸಾಲ ಮಾಡುವುದಲ್ಲಿ ನಿಸ್ಸೀಮ. ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೆ ಸಿ ರೆಡ್ಡಿ ಅವರಿಂದ ಹಿಡಿದು ಬಸವರಾಜ ಬೊಮ್ಮಾಯಿ ವರೆಗೆ ಆದ ಸಾಲ ಶೇ 40 ರಷ್ಟಿದ್ದರೆ ಸಿದ್ದರಾಮಯ್ಯ ಅವರೊಬ್ಬರೇ ಶೇ 60 ರಷ್ಟು ಸಾಲ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮಜಾರಾಮಯ್ಯ ಆಗಿದ್ದಾರೆ. ಅವರು ಸಮಾಜವಾದಿಯಲ್ಲ. ಅವರು ದಾಖಲೆಯ ಬಜೆಟ್ ಮಂಡಿಸಿದ್ದರೂ ಕರ್ನಾಟಕದ ಆರ್ಥಿಕ ಸ್ಥಿತಿ ಐಸಿಯುನಲ್ಲಿ ಇದೆ. ಆರ್ಥಿಕ ಶಿಸ್ತು ದಾಟಿ ಮ್ಯಾಜಿಕ್ ಮಾಡಿ ನಿಲ್ಲಿಸಿದ್ದಾರೆ. ಅವರು ಘೋಷಿಸಿದ ಗ್ಯಾರಂಟಿಗಳ ಹಣವನ್ನೂ ಸರಿಯಾಗಿ ನೀಡಲಿಲ್ಲ. ಎಲ್ಲ ಗ್ಯಾರಂಟಿಗಳ ಹಣವನ್ನೂ ಲಪಟಾಯಿಸಿದ್ದಾರೆ. ಅಭಿವೃದ್ಧಿ ಮಾಡದೆ ಸಾಲ ಮಾಡಿದ್ದಾರೆ. ಇμÉ್ಟಲ್ಲ ಆದರೂ ಯಾವ ಮುಖ ಇಟ್ಟುಕೊಂಡು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಮತ ಕೇಳುತ್ತೀರಿ ಎಂದು ಪ್ರಶ್ನಿಸಿದರು.
ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ಬೈಯುತ್ತಾರೆ. ಸಿದ್ದರಾಮಯ್ಯ ಅವರದು ಫೆÇೀನ್ ಪೇ ಸರ್ಕಾರ, ಲಂಚದ ಸರ್ಕಾರ. ಬಿಜೆಪಿಯವರು ಇದ್ದಾಗ ಅಭಿವೃದ್ಧಿ ಇಲ್ಲ ಅಂತ ಸಿದ್ದರಾಮಯ್ಯ ಅವರು ಹೇಳುತ್ತಾರೆ. ಕಾಂಗ್ರೆಸ್ ಬಂದಾಗ ಮಾತ್ರ ಒಂದೇ ಒಂದು ಬಸ್ ಸ್ಟ್ಯಾಂಡ್ ಕಟ್ಟಿಲ್ಲ. ಬಸ್‍ಗಳಿಲ್ಲ, ಶಿಕ್ಷಕರ ನೇಮಕ ಆಗಿಲ್ಲ. ಕನ್ನಡ ಶಾಲೆಗಳು ಮುಚ್ಚುತ್ತಿವೆ ಎಂದರು.
ಅಲ್ಪಸಂಖ್ಯಾತರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ದ್ರೋಹ ಬಗೆದಿದೆ. ಅವರ ಮತಗಳು ಬಿಜೆಪಿಗೆ ಸಿಗಲಿವೆ ಎಂಬ ವಿಶ್ವಾಸ ಇದೆ ಎಂದು ಪ್ರಶ್ನೆಯೊಂದಕ್ಕೆ ತಿಳಿಸಿದರು.
ತ್ರಿಭಾμÁ ಸೂತ್ರ ತಂದ ಪುಣ್ಯಾತ್ಮರು ಯಾರು. ಗಾಂಧಿ ಅವರು ಮೂವತ್ತು ವರ್ಷ ಹಿಂದಿ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು.
ನೆಹರು ಮತ್ತು ಇಂದಿರಾ ಅವರು ಹಿಂದಿ ಪ್ರಚಾರ ಆಗಲು ಪೆÇ್ರೀತ್ಸಾಹಿಸಿದ್ದರು. ಈಗ ಇವರೇ ಹಿಂದಿ ಕಡ್ಡಾಯ ಅಲ್ಲ ಅಂತಿದ್ದಾರೆ. ನರೇಗಾ ಹೆಸರು ಬದಲಾಯಿಸಿದ್ದಕ್ಕೆ ಬಾಯಿ ಬಾಯಿ ಬಡಕೊಂಡವರು ಈಗ ಹಿಂದಿ ಕಡ್ಡಾಯ ಅಲ್ಲ ಅಂದಾಗ ಯಾಕೆ ಮಾತನಾಡುತ್ತಿಲ್ಲ ಎಂದರು.
ಹಿಂದಿ ಕಡ್ಡಾಯ ಅಲ್ಲ ಎಂದು ಪರೀಕ್ಷೆ ವೇಳೆ ಹೇಳುವ ಬದಲು ಶಾಲೆ ಆರಂಭದಲ್ಲೇ ಹೇಳಿದ್ದರೆ ಒಳ್ಳೆಯದಾಗುತ್ತಿತ್ತು ಎಂದು ತಿಳಿಸಿದರು.
ಸಮರ್ಥ್ ಅವರು ಡಿ ಕೆ ಶಿವಕುಮಾರ್ ಅವರ ಅಭ್ಯರ್ಥಿ. ಸಚಿವ ಜಮೀರ್ ಅವರು ಇಲ್ಲಿಂದ ಕಾಲ್ಕಿತ್ತು ಕೇರಳಕ್ಕೆ ಓಡಿಹೋಗಿದ್ದಾರೆ. ಅಲ್ಲಿ ಸ್ಟಾರ್ ಪ್ರಚಾರಕ ಇಲ್ಲಿಗೆ ನೋ ಸ್ಟಾರ್ ಇಲ್ಲಿಗೆ ಗಬ್ಬರ್ ಸಿಂಗ್ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಮಾಡಿದ ಸಾಲವನ್ನು ಅಭಿವೃದ್ಧಿಗೆ ಬಳಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಏನೂ ಮಾಡಲಿಲ್ಲ ಎಂದರು.
ಭ್ರಷ್ಟ, ಮನೆಹಾಳ ಕಾಂಗ್ರೆಸ್ ತೊಲಗಿಸಲು, ಲಂಚದ ಸರ್ಕಾರ ಕಿತ್ತೊಗೆಯಲು ಬಿಜೆಪಿ ಬೆಂಬಲಿಸಿ
