ಬೆಂಗಳೂರು : ಕಳೆದ ವರ್ಷ ಸಿಇಟಿ ಪರೀಕ್ಷೆಯಲ್ಲಿ ಆದ ಜನಿವಾರದ ಜಟಾಪಟಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಹೀಗಾಗಿ ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ತಯಾರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಏಪ್ರಿಲ್ 23 ಹಾಗೂ 24 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ.
ವಸ್ತ್ರ ಸಂಹಿತೆ ಅಧಿಕಾರಿ ನೇಮಕ
ಕಳೆದ ವರ್ಷದ ಜನಿವಾರದ ವಿವಾದದಿಂದ ಈ ಸಲ ಪರೀಕ್ಷಾ ಪ್ರಾಧಿಕಾರ ಅಲರ್ಟ್ ಆಗಿದ. CET ಪರೀಕ್ಷೆಗೆ ವಸ್ತ್ರ ಸಂಹಿತೆ ಗಲಾಟೆ ತಡೆಯಲು ಕೆಇಎಯಿಂದ ಮಾಸ್ಟರ್ ಪ್ಲಾನ್ ಮಾಡಿದೆ. ಎಲ್ಲ 750 ಪರೀಕ್ಷೆ ಕೇಂದ್ರಗಳಲ್ಲಿಯೂ ವಸ್ತ್ರ ಸಂಹಿತೆ ಅಧಿಕಾರಿಗಳನ್ನ ನೇಮಕ ಮಾಡಲು ಕೆಇಎ ನಿರ್ಧರಿಸಿದೆ.
750 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ
ರಾಜ್ಯದಲ್ಲಿ ಇದೇ ಏಪ್ರಿಲ್ 23 ಹಾಗೂ 24 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, 3.30 ಲಕ್ಷ ವಿದ್ಯಾರ್ಥಿಗಳು 750 ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಈ ಹಿನ್ನಲೆ ಪ್ರಾಧಿಕಾರ ಡ್ರೆಸ್ ಕೋಡ್ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆಯಾ ಕಾಲೇಜಿನ ಹಿರಿಯ ಪ್ರಾಧ್ಯಾಪಕರಿಗೆ ಡ್ರೆಸ್ ಕೂಡ ವಿಚಾರವಾಗಿ ಈಗಾಗಲೇ ವಿಶೇಷ ತರಬೇತಿ ನೀಡಲಾಗಿದೆ ಎಂದ್ರು.
ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ
ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್, ಸರಳವಾದ ಪ್ಯಾಂಟ್ ಧರಿಸಬಹುದು. ಆದ್ರೆ ದೊಡ್ಡ ಬಟನ್, ಜಿಪ್ ಪಾಕೆಟ್ ಅಥವಾ ಹೆಚ್ಚಿನ ವರ್ಕ್ ಇರುವ ಬಟ್ಟೆಗಳನ್ನು ಧರಿಸಬಾರದು. ಶೂಗಳನ್ನು ನಿಷೇಧಿಸಲಾಗಿದ್ದು, ಚಪ್ಪಲಿ ಧರಿಸಿ ಬರಬೇಕು. ಕುತ್ತಿಗೆಯ ಸರ, ಕಿವಿಯೋಲೆ, ಉಂಗುರ ಅಥವಾ ಕಡಗಗಳಂತಹ ಯಾವುದೇ ಲೋಹದ ಆಭರಣಗಳನ್ನು ಧರಿಸುವಂತಿಲ್ಲ.
ಮಹಿಳಾ ಅಭ್ಯರ್ಥಿಗಳ ಡ್ರೆಸ್ ಕೋಡ್
ಮಹಿಳಾ ಅಭ್ಯರ್ಥಿಗಳು ಹೆಚ್ಚಿನ ಡಿಸೈನ್, ಹೂಗಳು, ಬ್ರೂಚ್ ಗಳು ಅಥವಾ ಬಟನ್ ಗಳು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪೂರ್ಣ ತೋಳಿನ ಬಟ್ಟೆ, ಜೀನ್ಸ್ ಪ್ಯಾಂಟ್ ಧರಿಸಬಾರದು. ಹೀಲ್ಡ್ ಶೂ, ಹೀಲ್ಡ್ ಚಪ್ಪಲಿ ಕೂಡ ಧರಿಸುವಂತಿಲ್ಲ.
ಕೇಂದ್ರದಲ್ಲೂ ಸಿಸಿ ಕ್ಯಾಮೆರಾ
ಇಷ್ಟು ಸಲ ಡ್ರೆಸ್ ಕೋಡ್ ವಿಚಾರದಲ್ಲಿ ಸ್ಪೆಷಲ್ ಕಾಳಜಿ ವಹಿಸಿರಲಿಲ್ಲ. ಈ ವರ್ಷದಿಂದ ವಸ್ತ್ರ ಸಂಹಿತೆಗೆ ಸ್ಪೆಷಲ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸುಮಾರು 3.30 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಪ್ರತಿ ಕೇಂದ್ರದಲ್ಲೂ ಸಿಸಿ ಕ್ಯಾಮೆರಾ ಮತ್ತು ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.
ನಿಷೇಧಿತ ವಸ್ತುಗಳು
-ಎಲೆಕ್ಟ್ರಾನಿಕ್ ಸಾಧನಗಳು: ಮೊಬೈಲ್, ಪೆನ್ ಡ್ರೈವ್, ಬ್ಲೂಟೂತ್, ಇಯರ್ ಫೋನ್ ಹಾಗೂ ಯಾವುದೇ ರೀತಿಯ ವಾಚ್
-ಸ್ಟೇಷನರಿ: ಪೆನ್ಸಿಲ್, ಎರೇಸರ್, ಜಿಯೋಮೆಟ್ರಿ ಬಾಕ್ಸ್, ಪೇಪರ್ ಅಥವಾ ಲಾಗ್ ಟೇಬಲ್.
-ಟೋಪಿ, ಮಾಸ್ಕ್, ಬಣ್ಣದ ಅಥವಾ ಲೋಹದ ನೀರಿನ ಬಾಟಲಿ ಹಾಗೂ ತಿಂಡಿ ತಿನಿಸುಗಳು.
ಸಿಇಟಿ ಪರೀಕ್ಷೆ ಬರೆಯುವವರಿಗೆ ಡ್ರೆಸ್ಕೋಡ್ ಕಡ್ಡಾಯ, ವಸ್ತ್ರಸಂಹಿತೆಯ ಫುಲ್ ಡೀಟೆಲ್ಸ್ ಇಲ್ಲಿದೆ
