Ad image

ಮರ್ಯಾದಾ ಹತ್ಯೆ ಭೀತಿ; ತಂದೆಯಿಂದ ರಕ್ಷಣೆ ಕೋರಿ ಮಗಳಿಂದಲೇ ಹೈಕೋರ್ಟ್​ಗೆ ಅರ್ಜಿ!

Team SanjeMugilu
1 Min Read

ಬೆಂಗಳೂರು: ತನ್ನ ಒಪ್ಪಿಗೆಯಿಲ್ಲದೆ ನಿಶ್ಚಯ ಮಾಡಿರುವ ಮದುವೆಯನ್ನು ಬೇಡ ಎಂದಿದ್ದಕ್ಕೆ ಮರ್ಯಾದಾ ಹತ್ಯೆ ಭೀತಿಯಿಂದ ಬೆಂಗಳೂರಿನ ಯುವತಿ ತಂದೆಯಿಂದ ರಕ್ಷಣೆ ಕೋರಿ ಹೈಕೋರ್ಟ್​ ಮೆಟ್ಟಿಲೇರಿದ್ದಾಳೆ. ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವ ಕಾಜಲ್ ರಾಜಪುರೋಹಿತ್ ಎಂಬ ಯುವತಿ, ತನ್ನ ತಂದೆ ಅಶೋಕ್ ರಾಜಪುರೋಹಿತ್ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದಾಳೆ.

ಮದುವೆ ಬೇಡ ಎಂದರೂ ತಂದೆಯ ಬಲವಂತ, ಮದುವೆಗೆ ತಯಾರಿ!
ಕಳೆದ ಎರಡು ವರ್ಷಗಳಿಂದ ಉದ್ಯೋಗದಲ್ಲಿರುವ ಯುವತಿಗೆ ಮದುವೆಯ ಮೇಲೆ ಆಸಕ್ತಿಯಿರಲಿಲ್ಲ. ತನ್ನ ಅಕ್ಕನಿಗೂ ಹೀಗೆ ಬಲವಂತದಿಂದ ಮದುವೆ ಮಾಡಿದ್ದನ್ನು ಕಂಡಿದ್ದ ಆಕೆಗೆ ತನ್ನ ಪರಿಸ್ಥಿತಿಯೂ ಹಾಗೆ ಆಗಿಬಿಡಬಹುದೆಂಬ ಆತಂಕವಿತ್ತು. ತಾನು ದುಡಿದು ತನ್ನ ಕಾಲ ಮೇಲೆ ನಿಂತ ಆಕೆಗೆ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲವೂ ಇತ್ತು. ಹೀಗಿರುವಾಗ ತನ್ನ ಒಪ್ಪಿಗೆಯಿಲ್ಲದೆ ತಂದೆ ಅಶೋಕ್ ರಾಜಸ್ಥಾನ ಮೂಲದ ಡಾ. ಯಶ್‌ಪಾಲ್ ಜೊತೆ ವಿವಾಹ ನಿಶ್ಚಯ ಮಾಡಿದ್ದರೆಂದು ಆರೋಪಿಸಿರುವ ಕಾಜಲ್, ತಂದೆಯ ನಿರ್ಧಾರವನ್ನು ವಿರೋಧಿಸಿದ್ದಾಳೆ. ವಿರೋಧದ ನಡುವೆಯೂ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿ ಹೈಕೋರ್ಟ್ ಮೊರೆ ಹೋಗಿದ್ದಾಳೆ.

ಯುವತಿಗೆ ಭದ್ರತೆ ಮೀಡುವಂತೆ ಆದೇಶಿಸಿದ ಕೋರ್ಟ್​
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ವೈಟ್‌ಫೀಲ್ಡ್ ಪೊಲೀಸರಿಗೆ ಕಾಜಲ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶನ ನೀಡಿದೆ. ಜೊತೆಗೆ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಸ್ಪಷ್ಟ ಸೂಚನೆ ನೀಡಿದೆ. ತಂದೆಯಿಂದ ಜೀವಭಯವಿದೆ ಎಂದು ಆರೋಪಿಸಿರುವ ಈ ಪ್ರಕರಣ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Share This Article