ಕಾರವಾರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ದುಷ್ಕರ್ಮಿಯೊಬ್ಬ ಬೆಂಕಿ ಇಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವರ ಹಕ್ಕಲದಲ್ಲಿ ನಡೆದಿದೆ.
18ರ ಹುಡುಗ ಈ ಕೃತ್ಯ ಎಸಗಿದ್ದಾರೆ. ದಿನಕರ್ ಎಂಬವರಿಗೆ ಸೇರಿದ ಮನೆ ಇದಾಗಿದೆ. ಕುಮಟಾದ ವೆಂಕಟರಮಣ ದೇವರ ಜಾತ್ರೆಗೆ ದಿನಕರ್ ಕುಟುಂಬ ತೆರಳಿತ್ತು. ಈ ವೇಳೆ ಬೆಂಕಿ ಇಡಲಾಗಿದೆ.
ಮನೆಗೆ ಬೆಂಕಿ ಹಚ್ಚುತ್ತಿದ್ದಂತೆ ನೆರೆಯವರು ಬೆಂಕಿ ನಂದಿಸಿದ್ದಾರೆ. ಆರೋಪಿಯನ್ನು ಕುಮಟಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಎಸ್‌ಪಿ ದೀಪನ್ , ಎಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮನೆ ಮಾಲೀಕ ದಿನಕರ್‌ಗೆ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ದೇವರ ಹಕ್ಕಲದಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಕುಮಟಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
