Ad image

ಅಕ್ಕ-ಪಕ್ಕದಲ್ಲಿ ಕುಳಿತರೂ ಮಾತಿಲ್ಲ-ಕಥೆಯಿಲ್ಲ; ಸಿಎಂ-ಡಿಸಿಎಂ ಮುನಿಸು ಸ್ಫೋಟ!? ಡಿಕೆ ಶಿವಕುಮಾರ್ ಏನಂದ್ರು?

Team SanjeMugilu
2 Min Read
ಬೆಂಗಳೂರು : ರಾಜ್ಯ ಕಾಂಗ್ರೆಸ್‌ನಲ್ಲಿ  ಮತ್ತೆ ಕುರ್ಚಿ ಕದನದ ಗರಿಗೆದರಿದೆ. ದೆಹಲಿಗೆ ಹೋಗಿ ಬಂದ್ಮೇಲೆ ಡಿಸಿಎಂ ಡಿಕೆ ಶಿವಕುಮಾರ್​​ ಆ್ಯಕ್ಟಿವ್ ಆಗಿದ್ದಾರೆ. ಪವರ್​ ಶೇರಿಂಗ್​ ಚರ್ಚೆಯ ನಡುವೆ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ  ಹಾಗೂ ಡಿಕೆ ಶಿವಕುಮಾರ್‌ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ರು. ಅಕ್ಕ-ಪಕ್ಕದಲ್ಲಿ ಕೂತಿದ್ರೂ ಇಬ್ಬರು ನಾಯಕರು ಮಾತಾಡಲಿಲ್ಲ. ಇದನ್ನ ನೋಡಿದವರು ಸಿಎಂ-ಡಿಸಿಎಂ ನಡುವಿನ ಮುನಿಸು ಜೋರಾದಂತೆ ಕಾಣ್ತಿದೆ ಅಂತಿದ್ದಾರೆ. ಮತ್ತೊಂದೆಡೆ ಡಿಕೆಶಿ ಮತ್ತೆ ಶ್ರಮ-ಫಲ-ಪ್ರತಿಫಲ ಜಪ ಮಾಡ್ತಿದ್ದಾರೆ.
‘ಸಿಎಂ ಕುರ್ಚಿ’ ಕಾದಾಟ

ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಿ ಬಂದಿರುವ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಕುರ್ಚಿ ಶೀಘ್ರದಲ್ಲೇ ಸಿಗುವ ಭರವಸೆಯಲ್ಲಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದು, ​ಹೈಕಮಾಂಡ್​ ನಿರ್ಧಾರಕ್ಕೆ ಬದ್ಧ ಅಂತಿದ್ದಾರೆ.
ಸಿಎಂ-ಡಿಸಿಎಂ ನಡುವೆ ಮುನಿಸು

ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ-2026 ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಭಾಗಿಯಾಗಿದ್ರು. ಕಾರ್ಯಕ್ರಮದ ವೇದಿಕೆಯಲ್ಲಿ ಅಕ್ಕ-ಪಕ್ಕದಲ್ಲೇ ಕುಳಿತಿದ್ದರೂ ಒಬ್ಬರಿಗೊಬ್ಬರು ಮಾತನಾಡಲಿಲ್ಲ. ಹೀಗಾಗಿ ಇಬ್ಬರು ನಾಯಕರ ನಡುವೆ ಮುನಿಸು ಜೋರಾಗಿದ್ಯಾ ಎನ್ನುವ ಪ್ರಶ್ನೆ ಜೋರಾಗಿದೆ.
ಶ್ರಮಕ್ಕೆ ಫಲ ಸಿಗುತ್ತೆ ಎಂದ ಡಿಕೆಶಿ

ಹೈಕಮಾಂಡ್ ಭೇಟಿ ಬಳಿಕ ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳ ನಿಮಿತ್ತ ಡಿಸಿಎಂ ಡಿಕೆ ಶಿವಕುಮಾರ್ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ನಾಯಕ ಭೇಟಿ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವ್ರು.  ಶ್ರಮಕ್ಕೆ ಫಲ ಯಾವತ್ತೂ ಇದೇ ಇರುತ್ತೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದ್ದೆ ಇರುತ್ತೆ ಎಂದಿದ್ದಾರೆ.
ಅಜ್ಜಯ್ಯನ ಮೊರೆ ಹೋದ್ರಾ ಡಿಸಿಎಂ?

ಸಿಎಂ ಸ್ಥಾನಕ್ಕಾಗಿ ಪಾಲಿಟಿಕ್ಸ್ ಜೊತೆಗೆ ದೇವರ ಮೊರೆ ಹೋಗಿದ್ದಾರಾ ಡಿಕೆಶಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನೋಣವಿನಕರೆಯ ಅಜ್ಜಯ್ಯನ ಜಾತ್ರೆ ಇದೆ. ಪ್ರತಿ ವರ್ಷವೂ ಹೋಗುತ್ತೇನೆ. ಹಾಗೇ ಈ ವರ್ಷವೂ ಹೋಗಿ ಅರ್ಧ ಗಂಟೆ ಇದ್ದು ನಮಸ್ಕಾರ ಮಾಡಿ ಬರುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ಸಾವಿರ ದಿನ ಕಳೆದಿದೆ. ನಾಳೆ ಹಾವೇರಿಯಲ್ಲಿ ಭೂಮಿ ಗ್ಯಾರಂಟಿ ಬಗ್ಗೆ ಕಾರ್ಯಕ್ರಮ ಇದೆ. ನಾವು ಆ ಸಂಭ್ರಮವನ್ನು ಜನರ ಜೊತೆ ಹಂಚಿಕೊಳ್ಳುತ್ತೇವೆ ಎಂದ್ರು. ವಿದೇಶ ಪ್ರವಾಸದ ಕುರಿತು ವರದಿ ತರಿಸಿಕೊಂಡಿದ್ದಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನು ಯಾವುದೇ ವರದಿ ಪಡೆಯೋ ಪ್ರಯತ್ನ ಮಾಡಿಲ್ಲ. ಇದರ ಬಗ್ಗೆ ಹೈಕಮಾಂಡ್ ನನ್ನ ಜೊತೆ ಮಾತಾಡಿಲ್ಲ, ಹೋಗುವವರು ಮಾತಾಡಿಲ್ಲ. ಕಳಿಸುವವರು ಮಾತಾಡಿಲ್ಲ ಎಂದಿದ್ದಾರೆ
Share This Article